ಆದಿಶೇಷ ಮತ್ತು ಗರುಡ ಸಹೋದರರಾ? ವಿಷ್ಣುವಿನ ವಾಹನ–ಹಾಸಿಗೆ ಹಿಂದೆ ಇರುವ ಅಸಾಧ್ಯ ಸತ್ಯ!

ನಮಸ್ತೇ,

ನಿಮ್ಗ್‌ ಗೊತ್ತಾ ನಾಗ ರಾಜ ಮತ್ತು ಪಕ್ಷಿ ರಾಜ ಅಂದರೇ ಆದಿಶೇಷ ಮತ್ತು ಗರುಡ ಇವರಿಬ್ಬರೂ ಸಹೋದರರ? ಹೌದು ಅಂತದ್ರೇ ಅದ್‌ ಹೇಗೆ ಬನ್ನಿ ತಿಳಿಯೋಣ ಇವತ್ತಿನ ವೀಡಿಯೋದಲ್ಲಿ.

 ಅಸಾಧ್ಯ ಅನ್ನಿಸಿದರು ಇದು ಸತ್ಯ ಆದಿಶೇಷ ಮತ್ತು ಗರುಡ, ಇವರಿಬ್ಬರೂ ಮಹರ್ಷಿ ಕಶ್ಯಪರ ಇಬ್ಬರೂ ಪತ್ನಿಯರದ ಕದ್ರು ಮತ್ತು ವಿನತೆಯ ಮಕ್ಕಳು. ಕದ್ರು ನಾಗಗಳ ತಾಯಿ. ವಿನತೆ ( ಗರುಡ ಪಕ್ಷಿಗಳ ತಾಯಿ)

ಕದ್ರು ಮತ್ತು ವಿನತೆ ಇಬ್ಬರೂ ಅಕ್ಕ-ತಂಗಿಯರು, ಕದ್ರು ತೀಕ್ಷ್ಣ, ಅಹಂಕಾರಭರಿತ ಸ್ಪರ್ಧೆಯ, ಕುಟಿಲ ವಂಚನೆಯ ತಂತ್ರಗಳನ್ನು ಬಳಸುವುದಕ್ಕೂ ಹಿಂಜರಿಯದ ಸ್ವಭಾವದವಳಗಿದ್ದಳು. ಕದ್ರು ತನ್ನ ಸಂತಾನದ ಶಕ್ತಿ ಮತ್ತು ಸಂಖ್ಯೆಯಿಂದ ಅಹಂಕಾರದಿಂದ ವರ್ತಿಸಿದಳು. ಅದರೇ ವಿನತೆ ಸರಳ, ಸಹನಶೀಲ ಮತ್ತು ಧರ್ಮನಿಷ್ಠ ಸ್ವಭಾವದವಳಗಿದ್ದಳು. ವಿನತೆಯ ಸಂತಾನವು ತಡವಾಗಿ ಜನಿಸಿದ್ದು, ಮೊದಲಿಗೆ ಅವಳು ಅವಮಾನ ಮತ್ತು ನಿರಾಶೆ ಅನುಭವಿಸಬೇಕಾಗಿ ಬಂದ್ದಿತ್ತು. ಇದರಿಂದ ಕದ್ರುವಿನ ಗರ್ವದಿಂದ, ವಿನತೆಗೆ ನೋವು ಉಂಟಾಗುತ್ತತ್ತು. ಈ ಕಾರಣ ಅವರ ನಡುವೆ ಸ್ಪರ್ಧೆ ಮತ್ತು ವೈರತ್ವ ಬೆಳೆಯಿತು. ಕದ್ರುವಿನ ಮನಸ್ಸಿನಲ್ಲಿ ಈ ವೈರತ್ವ ಒಂದು ಕೆಟ್ಟ ಸ್ಪರ್ಧೆಯ ಬೀಜ ಬಿತ್ತಿತು.

  ಉಚ್ಚೈಶ್ರವಸ ಇದು ಬೆಳ್ಳಗಿನ ಬಣ್ಣದ, ಏಳು ಮುಖಗಳನ್ನು ಹೊಂದಿದ ದಿವ್ಯ ಕುದುರೆ.  ದೇವಾಸುರರು ಕ್ಷೀರಸಾಗರವನ್ನು ಕಡೆದಾಗ ಉದ್ಭವಿಸಿದ 14 ರತ್ನಗಳಲ್ಲಿ ಉಚ್ಚೈಶ್ರವಸ್ಸು ಕೂಡ ಒಂದಾಗಿದೆ. ಒಮ್ಮೆ, ಕದ್ರು ಮತ್ತು ವಿನತೆಯರ ನಡುವೆ ಬಾಲದ ಬಣ್ಣದ (ಬಿಳಿ/ಕಪ್ಪು) ಬಗ್ಗೆ ಪಂಥ ಏರ್ಪಟ್ಟಾಗ, ಕದ್ರು ತನ್ನ ಮಗನಾದ ಕರ್ಕೋಟಕನನ್ನು ಉಚ್ಚೈಶ್ರವಸ್ಸಿನ ಬಾಲದಲ್ಲಿ ಅಡಗಿಕೊಳ್ಳುವಂತೆ ಮಾಡಿ ಬಾಲವು ಕಪ್ಪಾಗಿ ಕಾಣುವಂತೆ ಮೋಸ ಮಾಡಿದಳು. ಇದರಿಂದ ಪಂಥಾಹ್ವಾನದಲ್ಲಿ ಸೋತು ವಿನತೆಯು ಕದ್ರುವಿನ ದಾಸಿಯಾದಳು. ಕದ್ರು ವಿನತೆಯನ್ನು ಸೋಲಿಸಿ, ಅವಳನ್ನು ಮತ್ತು ಅವಳ ಮಗ ಗರುಡನನ್ನು ದಾಸ್ಯಕ್ಕೆ (ಗುಲಾಮಗಿರಿ) ತಳ್ಳಿದಳು. ಈ ದಾಸ್ಯದ ಕಾರಣದಿಂದಲೇ, ಗರುಡನಿಗೆ ಸರ್ಪಗಳ (Nagas) ಮೇಲೆ ಶಾಶ್ವತವಾದ ವೈರತ್ವ ಬೆಳೆಯಿತು.

ತಾಯಿ ವಿನತೆಯನ್ನು ನಾಗಗಳ ದಾಸ್ಯದಿಂದ ಮುಕ್ತಗೊಳಿಸಲು, ನಾಗಗಳು ಒಂದು ಷರತ್ತು ಹಾಕಿದವು: ಸ್ವರ್ಗದಿಂದ ಅಮೃತ ತಂದರೆ ವಿನತೆ ಬಿಡುಗಡೆ. ಗರುಡನು ತನ್ನ ತಾಯಿಯ ಮೇಲಿನ ಪ್ರೀತಿಯಿಂದ ಅಮೃತವನ್ನು ತರಲು ಹೊರಟನು. ದೇವತೆಗಳನ್ನು, ಇಂದ್ರನನ್ನೂ ಸೋಲಿಸಿ ಅಮೃತ ಕಲಶವನ್ನು ಹೊತ್ತು ತರುವಾಗ, ಅವನ  ಶೌರ್ಯ ಮತ್ತು ನಿಷ್ಠೆಯನ್ನು, ತಾಯಿಯ ಮೇಲಿನ ಪ್ರೀತಿ ಕಂಡ ಭಗವಾನ್ ವಿಷ್ಣುವು ಪ್ರತ್ಯಕ್ಷರಾದರು. ವಿಷ್ಣುವು, ಅಮೃತ ಕುಡಿಯದೆಯೇ ಅವನಿಗೆ ಅಮರತ್ವದ ವರ ನೀಡಿದರು. ಪ್ರತಿಯಾಗಿ, ಗರುಡನು ವಿನಮ್ರತೆಯಿಂದ ವಿಷ್ಣುವಿಗೆ ಸೇವೆ ಸಲ್ಲಿಸಲು ಕೇಳಿಕೊಂಡನು. ವಿಷ್ಣುವು ಗರುಡನನ್ನು ತಮ್ಮ ವಾಹನವನ್ನಾಗಿ ಸ್ವೀಕರಿಸಿದರು ಮತ್ತು ಎಲ್ಲಾ ಪಕ್ಷಿಗಳಿಗೆ ರಾಜನನ್ನಾಗಿ ಮಾಡಿದರು. ಹೀಗೆ, ಗರುಡನು ವಿಷ್ಣುವಿನ ನಿತ್ಯ ವಾಹನ (ಮೌಂಟ್) ಆಗಿ ಜಗತ್ತಿನಾದ್ಯಂತ ಸಂಚರಿಸುವ ಭಾಗ್ಯ ಪಡೆದನು. ಗರುಡನು ಶ್ರೇಷ್ಠ ಸೇವಕನಾಗಿ ಆಕಾಶದಲ್ಲಿ ವಿರಾಜಮಾನನಾದ.

ಇತ್ತ, ಕದ್ರುವಿನ ಮಕ್ಕಳಲ್ಲಿ ಒಬ್ಬನಾದ ಶೇಷನಾಗನು ತನ್ನ ಸಹೋದರರ ದುಷ್ಟತನ, ಕುತಂತ್ರ ಮತ್ತು ಕ್ರೂರ ನಡತೆಯಿಂದ ಬೇಸರಗೊಂಡಿದ್ದನು. ಅವನು ಎಲ್ಲವನ್ನೂ ತ್ಯಜಿಸಿ ಶಾಂತಿಯನ್ನು ಅರಸಲು ನಿರ್ಧರಿಸಿ ಕಠಿಣವಾದ ತಪಸ್ಸನ್ನು ಮಾಡಿದನು. ಅವನ ಈ ವೈರಾಗ್ಯ ಮತ್ತು ಧರ್ಮನಿಷ್ಠೆಗೆ ಬ್ರಹ್ಮದೇವರು ಮೆಚ್ಚಿದರು. ಶೇಷನು ಕೇವಲ ಧರ್ಮದಲ್ಲಿ ನಿಲ್ಲಲು ವರ ಕೇಳಿದನು. ಬ್ರಹ್ಮನು ಶೇಷನಿಗೆ ಮಹಾನ್ ಜವಾಬ್ದಾರಿ ನೀಡಿದರು: ಇಡೀ ಭೂಮಿಯನ್ನು ತನ್ನ ಸಾವಿರ ಹೆಡೆಗಳ ಮೇಲೆ ಸಮತೋಲನದಲ್ಲಿ ಹಿಡಿದಿಡುವುದು. ನಂತರ, ಅವನ ಕಠಿಣ ತಪಸ್ಸು,ವೈರಾಗ್ಯ ಮತ್ತು ಶಾಂತಿಯ ಹಾದಿಗೆ ಮೆಚ್ಚಿದ ವಿಷ್ಣುವು, ಅವನನ್ನು ತಮ್ಮ ಆದಿಶೇಷ ರೂಪವೆಂದು ಸ್ವೀಕರಿಸಿದರು. ಶೇಷನಾಗನು ವಿಷ್ಣುವಿನ ಅಂಶವಾದ ಆದಿಶೇಷನಾಗಿ, ಕ್ಷೀರಸಾಗರದಲ್ಲಿ ಕೋಟಿ ಹೆಡೆಗಳನ್ನು ಹರಡಿ, ವಿಷ್ಣುವು ಆರಾಮವಾಗಿ ಮಲಗಲು ಆಸನ (ಹಾಸಿಗೆ) ವಾಗಿ, ಸೇವೆ ಸಲ್ಲಿಸಲು ಪ್ರಾರಂಭಿಸಿದನು. ಹಾಗೂ ಇಡೀ ಭೂಮಿಗೆ ಆಧಾರವಾಗಿ ನಿಂತನು.

ಸಹೋದರರಾಗಿ ಹುಟ್ಟಿದ್ದರೂ, ಒಬ್ಬನು ಪರಾಕ್ರಮದಿಂದ ವಿಷ್ಣುವಿನ ವಾಹನವಾದರೆ, ಇನ್ನೊಬ್ಬನು ವೈರಾಗ್ಯದಿಂದ ವಿಷ್ಣುವಿನ ಹಾಸಿಗೆಯಾದನು. ಅವರ ಮಾರ್ಗಗಳು ಬೇರೆಯಾದರೂ, ಇಬ್ಬರೂ ನಿಷ್ಕಲ್ಮಶ ಭಕ್ತಿಯಿಂದ ಪರಮೋಚ್ಚ ದೈವಿಕ ಸ್ಥಾನವನ್ನು ಪಡೆದರು.

Leave a Comment

Your email address will not be published. Required fields are marked *

Scroll to Top