‘ಮಕರ ಸಂಕ್ರಾಂತಿ’ ಹೊಸ ವರ್ಷದ ಮೊದಲ ಹಬ್ಬದ ಸಂಭ್ರಮ. ‘ಉತ್ತರಾಯಣ’ದ ಆರಂಭ.

ಸಂಕ್ರಾಂತಿ ಬಂತೆಂದರೆ ಸಾಕು ನಾಡಿನೆಲ್ಲೆಡೆ ಹೊಸ ಸಂಭ್ರಮ. ಸೂರ್ಯನು ತನ್ನ ಪಥವನ್ನು ಬದಲಿಸಿ ನಮ್ಮ ಬದುಕಿನಲ್ಲಿ ಹೊಸ ಬೆಳಕು ತರುವ ಈ ಹಬ್ಬದ ಹಿಂದೆ ಅದೆಷ್ಟು ಅದ್ಭುತ ಕಥೆಗಳಿವೆ ಅಂತ ನಿಮಗೆ ಗೊತ್ತ? ಸಂಕ್ರಾಂತಿ  ಸಂ- ಅಂದರೇ ಸಂತೋಷ/ಸದ್ಬುದ್ಧಿ, ಕ್ರಾ- ಅಂದರೆ ಬದಲಾವಣೆ, ಂತಿ- ಅಂದರೇ ತೃಪ್ತಿ/ಶಾಂತಿ) ಅನ್ನೋ ಅರ್ಥ ಹೌದು ಪ್ರತಿ ರೈತ ತನು ವರ್ಷವಿಡಿ ಕಷ್ಟಪಟ್ಟು ಬೆಳೆದ ರಾಶಿಯನ್ನ ತೃಪ್ತಿ/ಶಾಂತಿ ತನ್ನ ಮನೆಗೆ ತಗೊಂಡೊಗೊ ಸಂತಸದ ದಿನನೇ ಸಂಕ್ರಾಂತಿ .  ಸಂಕ್ರಾಂತಿ ಪದದಲ್ಲೇ ಇದೆ  ‘ಸಂಕ್ರಮಣ’ ಅಥವಾ ಬದಲಾವಣೆ ಅಂತ.ಇದೇ ಸಮಯ  ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸೋದು ಎನ್ನಲಾಗುತ್ತದೆ ಇದೇ ‘ಮಕರ ಸಂಕ್ರಾಂತಿ’. ಈ ದಿನದಿಂದ ‘ಉತ್ತರಾಯಣ’ ಪುಣ್ಯಕಾಲ ಆರಂಭವಾಗುತ್ತದೆ. ಹೌದು ಸೂರ್ಯನು ಕರ್ಕಾಟಕ ರಾಶಿಯಿಂದ ಮಕರ ರಾಶಿಯವರೆಗೆ ಚಲಿಸುವ ಕಾಲವನ್ನು ‘ದಕ್ಷಿಣಾಯಣ’ ಎನ್ನಲಾಗುತ್ತದೆ. ಆದರೆ, ಮಕರ ಸಂಕ್ರಮಣದಿಂದ ಕರ್ಕಾಟಕ ರಾಶಿಯವರೆಗಿನ ಚಲನೆಯನ್ನು ‘ಉತ್ತರಾಯಣ’ ಎಂದು ಕರೆಯುತ್ತೇವೆ. ಈ ಉತ್ತರಾಯಣ ಕಾಲವು ಬಹಳ ಪುಣ್ಯದಾಯಕವಾದುದು ಎಂದು ನಮ್ಮ ಪುರಾಣಗಳು ಹೇಳುತ್ತವೆ.

ಈ ಸಮಯದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಬಲವಾದ ನಂಬಿಕೆ ಇದೆ. ಸ್ವತಃ ಶ್ರೀಕೃಷ್ಣನೇ ‘ಉತ್ತರಾಯಣವೇ ಶ್ರೇಷ್ಠ’ ಎಂದು ಹೇಳಿದ್ದಾನೆ. ಇದೇ ಕಾರಣಕ್ಕೆ ಕುರುಕ್ಷೇತ್ರ ಯುದ್ಧದಲ್ಲಿ ಗಾಯಗೊಂಡ ಭೀಷ್ಮ ಪಿತಾಮಹರು, ಅತೀವ ನೋವಿನಲ್ಲಿದ್ದರೂ ಉತ್ತರಾಯಣ ಬರುವವರೆಗೂ ಕಾಯ್ದು, ನಂತರವೇ ಇಚ್ಛಾಮರಣಿಯಾಗಿ ಪ್ರಾಣ ಬಿಟ್ಟರು. ಉತ್ತರಾಯಣದ ಮಹತ್ವ ಕೇವಲ ಅಷ್ಟಕ್ಕೇ ಮುಗಿಯುವುದಿಲ್ಲ. ಬ್ರಹ್ಮನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು, ಶಿವ-ಪಾರ್ವತಿಯರ ವಿವಾಹ ನಡೆದಿದ್ದು ಇದೇ ಪವಿತ್ರ ಕಾಲದಲ್ಲಿ. ಅಷ್ಟೇ ಏಕೆ, ನಾರಾಯಣನು ವರಾಹ ಅವತಾರ ತಾಳಿ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು ಮತ್ತು ಸಮುದ್ರ ಮಂಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಇದೇ ಕಾಲಘಟ್ಟದಲ್ಲಿ. ಈ ಕಾರಣದಿಂದಲೇ ಇಂದಿಗೂ ವಿವಾಹ, ನಾಮಕರಣ, ಗೃಹಪ್ರವೇಶದಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡಲಾಗುತ್ತದೆ.

ನಮಗೆಲ್ಲಾ ಸಂಕ್ರಾಂತಿ ಅಂದ್ರೆ ಶಾಂತಿಯ ಹಬ್ಬ ಅಂತ ಗೊತ್ತು. ಆದರೆ ಇದರ ಹಿಂದೆ ಒಬ್ಬ ರಾಕ್ಷಸನ ಸಂಹಾರದ ಕಥೆಯೂ ಇದೆ! ಹಿಂದೆ ಭೂಮಿಯ ಮೇಲೆ ‘ಶಂಕರಾಸುರ’ ಎಂಬ ರಾಕ್ಷಸನು ಜನರಿಗೆ ತುಂಬಾ ಹಿಂಸೆ ನೀಡುತ್ತಿದ್ದನು. ಆಗ ದೇವತೆಗಳ ಪ್ರಾರ್ಥನೆಗೆ ಓಗೊಟ್ಟ ದೇವಿ, ಒಂಬತ್ತು ಕೈಗಳ ‘ಸಂಕ್ರಾಂತಿ ದೇವತೆ’ಯಾಗಿ ಅವತರಿಸಿದಳು. ತನ್ನ ದಿವ್ಯ ಅಸ್ತ್ರಗಳಿಂದ ಶಂಕರಾಸುರನ ತಲೆ ಕತ್ತರಿಸಿ ಸಂಹರಿಸಿದಳು. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವಾದ ಈ ಸಂಭ್ರಮವೇ ಸಂಕ್ರಾಂತಿ. ಈ ಕಥೆಯನ್ನು ಕೇಳುವುದರಿಂದ ಮನೆಯಲ್ಲಿ ಸುಖ-ಶಾಂತಿ ಮತ್ತು ಧಾನ್ಯದ ಸಮೃದ್ಧಿ ಉಂಟಾಗುತ್ತದೆ ಅನ್ನೋದು ನಮ್ಮ ಒಂದು ನಂಬಿಕೆ.

ಮತ್ತೊಂದೆಡೆ, ಸಂಕ್ರಾಂತಿಯ ಸಂಜೆ ಸೂರ್ಯನ ಕಿರಣಗಳು ನಂದಿಯ ಕೊಂಬಿನ ನಡುವಿನಿಂದ ಹಾದು ನೇರವಾಗಿ ಶಿವಲಿಂಗಕ್ಕೆ ಅಭಿಷೇಕ ಮಾಡುವ ಪವಾಡ ಇಂದಿಗೂ ನಡೆಯುತ್ತದೆ. ಸೂರ್ಯನ ಕಿರಣಗಳು ಲಿಂಗದ ಮೇಲೆ ಹರಡಿ ‘ಸೂರ್ಯಾಭಿಷೇಕ’ ಮಾಡುತ್ತವೆ. ಇದು ಸೂರ್ಯನು ಶಿವನಿಗೆ ಸಲ್ಲಿಸುವ ಭಕ್ತಿಯ ಕಾಣಿಕೆಯಾಗಿದ್ದು, ಉತ್ತರಾಯಣದ ಆರಂಭವನ್ನು ಸೂಚಿಸುತ್ತದೆ.

ಈ ವಿಸ್ಮಯದ ಹಿಂದೆ ಎರಡು ಮುಖ್ಯ ಪುರಾಣ ಕಥೆಗಳಿವೆ:

ಏನ್ನದರೇ ಸಂಕ್ರಾಂತಿಯಂದು ಸೂರ್ಯನು ತನ್ನ ಮಗನಾದ ಶನಿದೇವರ ಮನೆಗೆ (ಮಕರ ರಾಶಿ) ಭೇಟಿ ನೀಡುತ್ತಾನೆ. ಈ ಮಿಲನದ ಗೌರವಾರ್ಥವಾಗಿ ಸೂರ್ಯನು ಶಿವನಿಗೆ ಕಿರಣಗಳ ಮೂಲಕ ನಮಿಸುತ್ತಾನೆ.

ಇನ್ನೋಂದು ಹಿಂದೆ ಗವಿ ಗುಹೆಯಲ್ಲಿ ಗೌತಮ ಮತ್ತು ಭರದ್ವಾಜ ಮುನಿಗಳು ಶಿವನನ್ನು ಕುರಿತು ತಪಸ್ಸು ಮಾಡಿದ್ದರು. ಅವರ ಭಕ್ತಿಗೆ ಮೆಚ್ಚಿ ಶಿವನು ಇಲ್ಲಿ ನೆಲೆಸಿದನು. ಅದ್ದರಿಂದ ಪ್ರತಿ ಸಂಕ್ರಾಂತಿಯಂದು ಸೂರ್ಯದೇವನು ಶಿವನ ಪಾದಕ್ಕೆ ನಮಸ್ಕರಿಸಲು ಬರುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಇದನ್ನ ಕಣ್ಣತುಂಬಿಕೊಳ್ಳದಕ್ಕೆ ನಮ್ಮ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಭಕ್ತರ ಸಾಗರವೇ ಬರತ್ತೆ. . ಜೊತೆಗೆ ಈ ಶುಭ ಕ್ಷಣದಲ್ಲಿ ದೇವರ ದರ್ಶನ ಪಡೆಯುವುದರಿಂದ ಪಾಪಗಳು ತೊಳೆದು ಹೋಗಿ, ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ಗಾಢವಾದ ನಂಬಿಕೆ. ಇದು ನಮ್ಮ ಪೂರ್ವಜರ ಖಗೋಳ ವಿಜ್ಞಾನಕ್ಕೆ ಸಾಕ್ಷಿಯಾಗಿದೆ.”

“ಇನ್ನು ಹಳ್ಳಿಗಳಲ್ಲಿ ಈ ದಿನ ದನಕರುಗಳಿಗೆ ಸ್ನಾನ ಮಾಡಿಸಿ ಕೊಂಬುಗಳಗೆ ಬಣ್ಣ ಹಚ್ಚಿ ಆಲಂಕಾರ ಮಾಡಿ ‘ಕಿಚ್ಚು ಹಾಯಿಸಲಾಗುತ್ತದೆ’. ರೈತರು ತಾವು ಬೆಳೆದ ಬೆಳೆಗಳನ್ನು ಕಣಗಳಲ್ಲಿ  ರಾಶಿ ಮಾಡಿ ಪೂಜೆ ಮಾಡುತ್ತಾರೆ. ಅದರಾಲ್ಲು ವಿಶೇಷವಾಗಿ ಈ ದಿನ ಸಣ್ಣ ಮಕ್ಕಳಿಗೆ ಆರೋಗ್ಯ ವೃದ್ಧಿಯಾಗಲೆಂದು ಫಲ ಎರಿತಾರೆ, ಎಳ್ಳು-ಬೆಲ್ಲ,ಕಬ್ಬಿನ ಜೊತೆ ಫಲವನ್ನು ಸೇರಿಸಿ ತಲೆಯ ಮೇಲೆ ಎರೆದು ದೃಷ್ಟಿ ತೆಗೆಯುವ ಸಂಪ್ರದಾಯ ತುಂಬಾ ಹಿಂದಿನಿಂದ ನಡ್ಕೊಂಡು ಬಂದಿದ್ದು ಇದು ಕೂಡ ಸಮೃದ್ಧಿಯ ಸಂಕೇತ . ಹೊಸ ಅಕ್ಕಿಯಿಂದ  ಸಿಹಿಯಾದ ಉಗ್ಗಿ ‘ಪೊಂಗಲ್’ ಮಾಡಿ, ಮನೆ,ಮೆನೆಗೆ ಹೋಗಿ ಪ್ರೀತಿಯಿಂದ ಎಳ್ಳು-ಬೆಲ್ಲ ಹಂಚುವುದು ಈ ಹಬ್ಬಕ್ಕೆ ಒಂದು ಸೊಬಗು ನೀಡತ್ತೆ.”

ಎಲ್ಲಾರು ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತಾಡಿ . “ಸಂಕ್ರಾಂತಿಯ ಶುಭಾಷಯಗಳು”

Leave a Comment

Your email address will not be published. Required fields are marked *

Scroll to Top