ಮಾರ್ಗಶಿರ ಮಾಸದ ಗುರುವಾರದ ಲಕ್ಷ್ಮಿಯ ವ್ರತದ ಮಹತ್ವ.

ಮಾರ್ಗಶಿರ ಮಾಸವು ವಿಷ್ಣುವಿನ ಪ್ರಿಯ ಮಾಸ. ಗುರುವಾರ—ಬೃಹಸ್ಪತಿಯ ದಿನ—ಜ್ಞಾನ, ಧರ್ಮ, ಶ್ರೀಮಂತರಾಶಿಯ ಸಂಕೇತ. ಈ ಎರಡು ಸೇರಿದಾಗ — ಲಕ್ಷ್ಮಿ ಕೃಪೆ ಸಾವಿರಗುನ ಹೆಚ್ಚಾಗಿ ದೊರೆಯುತ್ತದೆ. ಅದ್ದರಿಂದ   ಮಾರ್ಗಶಿರ ಮಾಸ ಗುರುವಾರದ ಬೆಳಿಗ್ಗೆ ಲಕ್ಷ್ಮಿಯ ಕೃಪೆ ಎಲ್ಲ ಮನೆಗಳಿಗೂ ಸುಲಭವಾಗಿ ಬರುವ ದಿನ ಅಂತ ಹೇಳ್ತಾರೆ.

ಈ ದಿನ ಮನೆಯ ಬಾಗಿಲಿಗೆ ಹಳದಿ ಬಣ್ಣದಿಂದ ರಂಗೋಲಿ   ಹಾಕಿ , ತಾಯಿ ಲಕ್ಷ್ಮಿಯ ಪಾದಗಳನ್ನು ಕುಂಕುಮದ ನೀರಿನಿಂದ ಬಿಡಿಸಿ ಪೂಜಿಸಲಾಗುತ್ತದೆ. ಇದರ್ಥ ಲಕ್ಷ್ಮಿ ದೇವಿ ನಮ್ಮ ಮನೆಗಳಿಗೆ ಪ್ರವೇಶಿಸುವುದಾಗಿದೆ. ಲಕ್ಷ್ಮಿ ದೇವಿಗೆ ಹಳದಿ ಹೂವು, ಅರಿಶಿನ-ಕುಂಕುಮ, ಅಕ್ಷತೆ ಜೊತೆಗೆ ಪಾಯಸ ಅಥಾವ ಬೇಳೆ-ಅಕ್ಕಿ (ಕಿಚಡಿ) ನೈವೇದ್ಯ ಅರ್ಪಿಸಿ. ಸಂಜೆ ಸಮಯಕ್ಕೆ ಈ ದಿನ ಹಚ್ಚುವ ಒಂದು ದೀಪ… ಕೇವಲ ಬೆಳಕು ಅಲ್ಲ… ಮನೆಯಲ್ಲಿ ಶಾಂತಿ, ಆರೋಗ್ಯ, ಐಶ್ವರ್ಯದ ಸಂಕೇತ.” ವಾಗಿದ್ದು ,  ಲಕ್ಷ್ಮೀ ಅಷ್ಟೋತ್ತರ ಪಠಣ ಮಾಡುವುದು ಹೆಚ್ಚು ಫಲ ತರುತ್ತದೆ.

ಇದರ ಬಗ್ಗೆ “ಪುರಾಣದಲ್ಲಿ ಒಂದು ಸುಂದರ ಕಥೆಯೇ ಇದೆ. ಒಮ್ಮೆ, ಲಕ್ಷ್ಮೀ ದೇವಿ ವೃದ್ದೆಯ ರೂಪದಲ್ಲಿ ಧರೆಗೆ ಬಂದಳು. ಒಂದು ಮನೆಗೆ ಹೋದಾಗ ಅವರು ಬಾಗಿಲು ತೆರೆದೇ ಇರಲಿಲ್ಲ. ಆದರೆ ಮತ್ತೊಂದು ಮನೆ  ಸರಳ, ಬಡ ಕುಟುಂಬದವರದರು ಕೂಡ ಅವರು ವಿನಯದಿಂದ ಲಕ್ಷ್ಮೀ ದೇವಿಯನ್ನು  ಒಳಗೆ ಆಹ್ವಾನಿಸಿದರು. ಅವರ ಮನೆಯಲ್ಲಿ ಅಲಂಕಾರ ಇರಲಿಲ್ಲ. ಸಾಧಾರಣ ದೀಪ, ಸ್ವಲ್ಪ ಹೂವು… ಆದರೂ ಮನಸ್ಸು ಶುದ್ಧ ಮತ್ತು ಭಕ್ತಿಯಿಂದ ತುಂಬಿತ್ತು.

ಆ ಮನೆಗೆ ದೇವಿ ಆಶೀರ್ವಾದ ಕೊಡ್ತಾ ಹೇಳಿದಳುನೀನು ಗುರುವಾರ ನನ್ನನ್ನು ಸ್ಮರಿಸಿ ದೀಪ ಹಚ್ಚಿದರೆ…
ನಿನ್ನ ಮನೆಯಲ್ಲೇ ಐಶ್ವರ್ಯ ನಿಲ್ಲುತ್ತದೆ.ಜೊತೆಗೆ ಈ ದಿನ ನನ್ನ ಪೂಜಿಸುವವರಿಗೆ ಗುರುವಿನ ಕೃಪೆಯ ಜೊತೆ ಲಕ್ಷ್ಮಿ ಕಟಾಕ್ಷ ದೊರೆಯಾಲಿ ಎಂದು ಆಶೀರ್ವಾದಿಸಿದರು.

ಆದ್ದರಿಂದ, ಮಾರ್ಗಶಿರ ಮಾಸದ ಗುರುವಾರದ ವ್ರತಕ್ಕೆ ವಿಶೇಷ ಮಹತ್ವ ಬಂತು. ಈ ದಿನ ಮನೆಗೆ ಲಕ್ಷ್ಮಿಯ ಹೆಜ್ಜೆಗಳನ್ನು ಆಹ್ವಾನಿಸುವ ಪದಕೆ ಬಿಡಿಸಿ… ಒಂದು ತುಪ್ಪದ ದೀಪ ಹಚ್ಚೋದು… ಸ್ವಲ್ಪ ಹಳದಿ ಹೂ ಅರ್ಪಿಸೋದು… ಸಾಧ್ಯವಾದರೇ ಒಬ್ಬರಿಗಾದರು ಸಣ್ಣದಾದರೊಂದು ದಾನ ಮಾಡೋದು… ಮತ್ತು ಈ ದಿನ ಮಾಡೋ ಸಣ್ಣ ಕಾರ್ಯಗಳೇ ದೊಡ್ಡ ಪುಣ್ಯ ತಂದುಕೊಡುತ್ತದೆ… ಇವುಗಳಲ್ಲೇ ವ್ರತದ ಸಾರ.

ಈ ಬಾರಿಯ 2025ಮಾರ್ಗಶಿರ ಗುರುವಾರ ಲಕ್ಷ್ಮಿ ವ್ರತದ   ದಿನಾಂಕಗಳು: ನವೆಂಬರ್‌ 27, ದಿಸೆಂಬರ್‌ 4,11,18 ಒಟ್ಟು ನಾಲ್ಕು ವಾರಗಳು. “ಮಾರ್ಗಶಿರ ಗುರುವಾರ… ಅಲಂಕಾರದ ದಿನವಲ್ಲ… ಭಕ್ತಿಯ ದಿನ.

         ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮನೆ, ನಿಮ್ಮ ಕೆಲಸ, ನಿಮ್ಮ ಜೀವನದ ಮೇಲೆ ಸದಾ ಇರಲಿ.

Leave a Comment

Your email address will not be published. Required fields are marked *

Scroll to Top