
ನಾವು ಒಂದೇ ದೇಶವನ್ನು ಸೂಚಿಸಲು, ವಿಭಿನ್ನ ಇತಿಹಾಸ ಮತ್ತು ಅರ್ಥವನ್ನು ಹೊಂದಿರುವ ಭಾರತ ಮತ್ತು ಇಂಡಿಯಾ ಎಂಬ ಎರಡು ವಿಭಿನ್ನ ಹೆಸರುಗಳನ್ನು ಬಳಸುತ್ತೇವೆ. ನಮ್ಮ ದೇಶಕ್ಕೆ ಈ ಹೆಸರುಗಳು ಹೇಗೆ ಬಂತು ಎಂದು ತಿಳಿಯೋಣ.
ಭಾರತ’ ಎಂಬ ಹೆಸರು ದೇಶದ ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ಹೆಸರು. ಇದು ಪ್ರಾಚೀನ ಭಾರತೀಯ ಗ್ರಂಥಗಳು ಮತ್ತು ಮಹಾಕಾವ್ಯಗಳಾದ ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾದ ಪೌರಾಣಿಕ ಚಕ್ರವರ್ತಿ *’ಭರತ’*ನಿಂದ ಬಂದಿದೆ ಎನ್ನಲಾಗುತ್ತದೆ. ಅವನ ಸಾಮ್ರಾಜ್ಯವು ಇಡೀ ಭಾರತ ಉಪಖಂಡವನ್ನು ಒಳಗೊಂಡಿತ್ತು. ಭರತನು ಧರ್ಮನಿಷ್ಠ ಮತ್ತು ಪ್ರಬಲ ರಾಜನಾಗಿದ್ದನು, ಭರತ ಚಕ್ರವರ್ತಿಯ ಆಳ್ವಿಕೆಯ ಕಾರಣದಿಂದ ಈ ಭೂಮಿಗೆ ‘ಭರತವರ್ಷ’ ಅಥವಾ ‘ಭರತಖಂಡ’ ಎಂಬ ಹೆಸರು ಬಂದಿತು. ಕಾಲಾಂತರದಲ್ಲಿ ‘ಭಾರತ‘ ಎಂದು ಬಳಕೆಗೆ ಬಂದಿತು.
ಇಂಡಿಯಾ ಎಂಬ ಹೆಸರು ಬರಲು ಮೂಲ ಕಾರಣ (ಕ್ರಿ.ಶ. 500-1800) ಅವಧಿಯಲ್ಲಿ ಬಂದ ಪ್ರಾಚೀನ ಪರ್ಷಿಯನ್ನರು ಸಿಂಧೂ ನದಿಯ ಆಚೆಗಿನ ಪ್ರದೇಶವನ್ನು ‘ಹಿಂದ್’ ಅಥಾವ ಹಿಂದೂಸ್ಥಾನ್ ಎಂದು ಕರೆದರು, 18ನೇ ಶತಮಾನದಿಂದ ಗ್ರೀಕರು ಅದನ್ನು ‘ಇಂಡೋಯಿ’ ಅಥಾವ ಇಂಡಸ್ ಎಂದು ಕರೆದರು. ನಂತರ ಇಂಡಿಯಾ‘ ಎಂಬ ಹೆಸರು ಹೆಚ್ಚು ಪ್ರಚಲಿತವಾಯಿತು. ರೋಮನ್ನರು ಮತ್ತು ಬ್ರಿಟಿಷರಂತಹ ಯುರೋಪಿಯನ್ ಶಕ್ತಿಗಳು ಅಳವಡಿಸಿಕೊಂಡರು ಮತ್ತು ತಮ್ಮ ಆಡಳಿತದ ಸಮಯದಲ್ಲಿ ವ್ಯಾಪಕವಾಗಿ ಬಳಸಿದರು. ಬ್ರಿಟಿಷ್ ಆಡಳಿತದಲ್ಲಿ ಇದು ದೇಶದ ಅಧಿಕೃತ ಹೆಸರಾಗಿ ಮಾರ್ಪಟ್ಟಿತು.
ಸ್ವಾತಂತ್ರ್ಯ ಬಂದ ನಂತರ, ದೇಶದ ಹೆಸರಿನ ಬಗ್ಗೆ ಸಂವಿಧಾನ ರಚನಾ ಸಭೆಯ ಚರ್ಚೆಯ ನಂತರ, 1950ರಲ್ಲಿ ಭಾರತದ ಸಂವಿಧಾನದ ಆರ್ಟಿಕಲ್ 1 ರಲ್ಲಿ “India, that is Bharat, shall be a Union of States” ಅಂದರೆ (ಇಂಡಿಯಾ, ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ) ಎಂದು ಅಧಿಕೃತವಾಗಿ ಅಂಗೀಕರಿಸಲಾಯಿತು. ಇದು ಎರಡೂ ಹೆಸರುಗಳು ದೇಶಕ್ಕೆ ಮಾನ್ಯವಾಗಿವೆ ಎಂದು ಅಧಿಕೃತವಾಗಿ ಘೋಷಿಸಿತು. ಈ ಮೂಲಕ, ‘ಭಾರತ’ ಎಂಬ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹೆಸರಿನ ಜೊತೆಗೆ ಇಂಡಿಯಾ’ ಎಂಬ ಆಧುನಿಕ ಹೆಸರು ಸಮಾನ ಸ್ಥಾನಮಾನವನ್ನು ಪಡೆಯಿತು.
ಭಾರತ ಎಂಬುದು ದೇಶದ ಆಂತರಿಕ, ಸಾಂಸ್ಕೃತಿಕ ಬೇರುಗಳನ್ನು ಪ್ರತಿನಿಧಿಸುವ ಹೆಸರದರೇ , ಇಂಡಿಯಾ‘ ಎಂಬುದು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ, ದೇಶದ ಇತ್ತೀಚಿನ ಬಾಹ್ಯ ಮತ್ತು ಐತಿಹಾಸಿಕ ಸಂಬಂಧಗಳನ್ನು ಪ್ರತಿನಿಧಿಸುವ ಹೆಸರಗಿದೇ,. ಇದು ಭಾರತದ ವಿಶಿಷ್ಟ ಇತಿಹಾಸದ ಪ್ರತಿಬಿಂಬವಾಗಿದೆ.
