‘ಸದ್ಧಲೇ’.. ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ: ಏಳುಕೋಟಿ ವಿಜಯದ ರೋಚಕ ಕಥೆ!

ಉತ್ತರ ಕರ್ನಾಟಕದ ವಿಜಯನಗರ  ಜಿಲ್ಲೆಯ,  ತುಂಗಾಭದ್ರ ನದಿತೀರದ ಸಮೀಪದಲ್ಲಿರುವ  ಮೈಲಾರ ಕ್ಷೇತ್ರ . ಲಕ್ಷಾಂತರ ಭಕ್ತರು ಅರಿಶಿನದ ಬಣ್ಣದಲ್ಲಿ ಮಿಂದೇಳುವ, ‘ಸದ್ಧಲೇ’ ಎಂಬ ಒಂದು ನುಡಿಗೆ ಇಡೀ ರಾಜ್ಯವೇ ಕಾಯುವ ಆ ಅದ್ಭುತ ಕ್ಷಣವೇ. ಭರತ ಹುಣ್ಣಿಮೆಯ ಮೈಲಾರಲಿಂಗೇಶ್ವರನ ಜಾತ್ರೆ ಮತ್ತು ‘ಕಾರ್ಣಿಕೋತ್ಸವ’. ಇದೇ ಫೆಬ್ರವರಿ 1, ಮೈಲಾರಲಿಂಗೇಶ್ವರನ ಜಾತ್ರೆ ನಡೆಯಲಿದ್ದು, ಮರುದಿನ ಫೆಬ್ರವರಿ 2 ರಂದು ‘ಕಾರ್ಣಿಕೋತ್ಸವ’ ಇದೆ. ಈ ಕ್ಷೇತ್ರದ ಇತಿಹಾಸ ಮತ್ತು ಮೈಲಾರಲಿಂಗೇಶ್ವರನು ಅವತಾರವೆತ್ತಿದ ಕಥೆ ತುಂಬಾನೇ ರೋಚಕವಾಗಿದೆ. ಮಣಿ ಮತ್ತು ಮಲ್ಲಾಸುರ ಎಂಬ ಇಬ್ಬರು ರಾಕ್ಷಸ ಸಹೋದರರು ಬ್ರಹ್ಮನಿಂದ ವರವನ್ನು ಪಡೆದು ಅತ್ಯಂತ ಶಕ್ತಿಶಾಲಿಗಳಾಗಿರುತ್ತಾರೆ. ಈ ಅಸುರರು ಭೂಲೋಕದ ಋಷಿಮುನಿಗಳಿಗೆ ಮತ್ತು ದೇವತೆಗಳಿಗೆ ವಿಪರೀತ ತೊಂದರೆ ಕೋಡೊಕೆ ಆಂಭಸ್ತಾರೆ. ಅವರ ಅಹಂಕಾರ ಮಿತಿಮೀರಿ, ಸಪ್ತರ್ಷಿಗಳ ತಪಸ್ಸಿಗೆ ಭಂಗ ಬಂದಾಗ. ದೇವತೆಗಳು ಮತ್ತು ಋಷಿಗಳು ಅಸುರರ ಕಾಟ ತಾಳಲಾರದೆ ಭಗವಾನ್ ಶಿವನ ಮೊರೆ ಹೋಗುತ್ತಾರೆ. ಆಗ ಭಗವಂತನು ದುಷ್ಟ ಸಂಹಾರಕ್ಕಾಗಿ ಮಾರ್ತಾಂಡ ಭೈರವ (ಮೈಲಾರಲಿಂಗೇಶ್ವರನಾಗಿ ಅವತಾರ ತಾಳಿದ ಶಿವನು. ತನ್ನ  ಪತ್ನಿಯಾದ ಪಾರ್ವತಿ ದೇವಿಯನ್ನು ಭೂಲೋಕದ ಉದ್ಧಾರಕ್ಕಾಗಿ  ಗಂಗಾ ಮಾಲಮ್ಮಳನ್ನಾಗಿ ತನ್ನ  ಜೊತೆಗೆ ಕರೆದುಕೊಂಡು, 7 ಕೋಟಿ ಕುದುರೆ ಸವಾರರ ಸೈನ್ಯದೊಂದಿಗೆ ಭೂಮಿಗೆ ಇಳಿದು ಬರುತ್ತಾನೆ. ಹಾಗಾಗಿಯೇ ಏಳುಕೋಟಿ ಮೈಲಾರಲಿಂಗೇಶ್ವರ ಅಂತ ಕರೆಲಾಗರತ್ತೆ. ಭೂಮಿಗೆ ಬಂದ ಭಗವಂತ ಮೈಲಾರಲಿಂಗೇಶ್ವರನು ಮಣಿ ಮತ್ತು ಮಲ್ಲಾಸುರರ ವಿರುದ್ಧ ಘೋರ ಯುದ್ಧ ಮಾಡುತ್ತಾನೆ. ಶಿವನ 7 ಕೋಟಿ ಸೈನ್ಯವು ರಾಕ್ಷಸ ಪಡೆಯನ್ನು ಧ್ವಂಸ ಮಾಡ್ತಾರೆ. ಅಂತಿಮವಾಗಿ ಮೈಲಾರಲಿಂಗೇಶ್ವರನು ಇಬ್ಬರೂ ಅಸುರರನ್ನು ಸಂಹರಿಸುತ್ತಾನೆ. ರಾಕ್ಷಸರನ್ನು ಕೊಂದ ನಂತರ, ಅವರ ತಲೆಗಳನ್ನು ತನ್ನ ಕಾಲಿನಡಿ ಇಟ್ಟುಕೊಳ್ಳುತ್ತಾನೆ. ಅಂದಿನಿಂದಲೇ ಈ ಜಾಗ “ಮೈಲಾರ” ಎಂದು ಪ್ರಸಿದ್ಧಿಯಾಯಿತು. ಆ ರಾಕ್ಷಸರ ಸಂಹಾರವಾದ ಆ ಪವಿತ್ರ ಭೂಮಿಯೇ ಇಂದಿನ ‘ಮೈಲಾರ’.

ಈ ಯುದ್ಧದಲ್ಲಿ ಶಿವನಿಗೆ ಸಾಥ್ ನೀಡಿದವರು ಅವನ ನಿಷ್ಠಾವಂತ ಭಕ್ತರು. ಅವರೇ ಇಂದಿನ ಗೊರವಯ್ಯಗಳು. ಕಪ್ಪು ಕಂಬಳಿ ಹೊದ್ದು, ಡಮರುಗ ಹಿಡಿದು, ಬಾಯಿಯಲ್ಲಿ ಬೆತ್ತ ಹಿಡಿದ ನಿಷ್ಠಾವಂತ ಸೈನ್ಯದ ಸಂಕೇತವಾಗಿದ್ದರೆ. ಒಬ್ಬರಿಗೊಬ್ಬರು ಅರಿಶಿನವನ್ನು ಅಥವಾ ‘ಬಂಡಾರ’ವನ್ನು ಎರಚುತ್ತಾ ಏಳುಕೋಟಿ ಏಳುಕೋಟಿ ಏಳುಕೋಟಿಗೋ ಚಾಂಗಮಲೋ  ಅಂತಹೇಳಿ ಹಾಡುವುದು ಇಲ್ಲಿನ ವಿಶೇಷ.”

ಇನ್ನು, ಈ ಜಾತ್ರೆಯ ಅತ್ಯಂತ ಮಹತ್ವದ ಕ್ಷಣ ಬರುವುದೇ ‘ಭರತ ಹುಣ್ಣಿಮೆ’ಯ ಮರುದಿನದ ‘ಕಾರ್ಣಿಕೋತ್ಸವ’ ಈ ದಿನ ಲಕ್ಷಾಂತರ ಭಕ್ತರು “ಡೆಂಕಣ ಗುಡ್ಡ”ದಲ್ಲಿ ಜಮಾಯಿಸುತ್ತಾರೆ. ಅಲ್ಲಿ ಸುಮಾರು 11 ರಿಂದ 14 ಅಡಿ ಎತ್ತರದ ಬಿಲ್ಲನ್ನು (ಧನುಸ್ಸು) ನೆಡಲಾಗಿರುತ್ತದೆ. ಕಟ್ಟುನಿಟ್ಟಾದ ಉಪವಾಸ ವ್ರತ ಕೈಗೊಂಡ ಗೊರವಯ್ಯನು, ಬಿಲ್ಲನ್ನು ಏರಿ ನಿಲ್ಲುತ್ತಾರೆ. ಸುತ್ತಲೂ ಮೌನ ಆವರಿಸಿದಾಗ, ‘ಸದ್ಧಲೇ‘ (ಸತ್ಯವಾಯಿತು) ಎಂದು ಕೂಗಿ, ಆತ ಆಕಾಶದತ್ತ ದೃಷ್ಟಿಇಟ್ಟು ದೈವಪ್ರೇರಿತನಾಗಿ ಒಂದು ವಾಕ್ಯವನ್ನು ನುಡಿಯುತ್ತಾರೆ. ಆ ನುಡಿಯ ನಂತರ ಪರಾಕ್‌ (ಎಚ್ಚರಿಕೆ) ಎಂದು ಹೇಳಿ ಕೆಳಕ್ಕೆ ಜಿಗಿಯುತ್ತಾನೆ. ಅದು ವರ್ಷದ ಭವಿಷ್ಯವಾಗಿದೆ. ಆ ಒಂದು ಶಬ್ದಕ್ಕಾಗಿ ಲಕ್ಷಾಂತರ ಕಿವಿಗಳು ಕಾಯುತ್ತಿರುತ್ತವೆ. ಆತ ನುಡಿಯುವ ಪ್ರತಿಯೊಂದು ಅಕ್ಷರವೂ ಆ ವರ್ಷದ ವಿಧಿಲಿಖಿತ ಎಂದೇ ನಂಬಲಾಗಿದೆ. ಮೈಲಾರದ ಕಾರ್ಣಿಕದ ನುಡಿ ಇಂದಿನವರೆಗೂ ಸುಳ್ಳಾದ ಇತಿಹಾಸವಿಲ್ಲ!“‌

Leave a Comment

Your email address will not be published. Required fields are marked *

Scroll to Top