“ಹನುಮದ್ ಜಯಂತಿ” ರಘುನಾಥನ ಭಕ್ತಯಾದ ಹನುಮಂತನ ಜನ್ಮ ಉತ್ಸವ.

ಭಗವಾನ್ ಹನುಮಂತನು ಅಂಜನಾದೇವಿ ಮತ್ತು ಕೇಸರಿ ಅವರ ಪುತ್ರ. ಇವನನ್ನು ವಾಯುಪುತ್ರ ಮತ್ತು ಶಿವನ ೧೧ನೇ ರುದ್ರನ ಅವತಾರ “ರೂದ್ರಾಂಶ ಸಮ್ಭವ” ಎಂದೂ ಕರೆಯಲಾಗುತ್ತದೆ.

 ಹನುಮದ್ ಜಯಂತಿಯನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಪ್ರಾದೇಶಿಕ ಸಂಪ್ರದಾಯಗಳು ಮತ್ತು ಹನುಮಂತನ ಜೀವನದ ಎರಡು ಮಹತ್ವದ ಘಟನೆಗಳನ್ನು ಸ್ಮರಿಸುವುದು. ಭಾರತದ ವಿವಿಧ ಭಾಗಗಳಲ್ಲಿ ಮತ್ತು ಪಾರಂಪರಿಕ ಪಂಚಾಂಗಗಳಲ್ಲಿ ಹನುಮಂತನ ಜನ್ಮದಿನವನ್ನು ಲೆಕ್ಕ ಹಾಕುವ ರೀತಿ ಬೇರೆಬೇರೆ.

ಸಾಮಾನ್ಯವಾಗಿ ಚೈತ್ರ ಮಾಸದ ಪೂರ್ಣಿಮೆಯನ್ನು ಹನುಮಂತನ ಜನ್ಮ ದಿನವೆಂದು ಪರಿಗಣಿಸುತ್ತಾರೆ. ಇದು ಅವನ ಜನ್ಮ ಉತ್ಸವ. ಈ ದಿನ → ರಘುನಾಥನ ಭಕ್ತಯಾದ ಹನುಮಂತನ ಜನ್ಮವನ್ನು ನೆನೆದು ಆಚರಿಸುವದು ಸಂಪ್ರದಾಯ.

ವಾಲ್ಮೀಕಿ ರಾಮಾಯಣದ ಪ್ರಕಾರ, ಹನುಮಂತನ ತಾಯಿ ಅಂಜನಾದೇವಿ (ವಾನರಿಯಾಗಿ ಜನ್ಮ ಪಡೆದ ಒಬ್ಬ ಶಾಪಗ್ರಸ್ತ ಅಪ್ಸರೆ) ಮತ್ತು ತಂದೆ ಕೇಸರಿ (ಸುಮೇರು ಪ್ರದೇಶದ ರಾಜ). ಅಂಜನಾದೇವಿಯು ಮಕ್ಕಳಿಲ್ಲದಿದ್ದಾಗ ಶಾಪ ವಿಮೋಚನೆಗಾಗಿ ಶಿವನ ಭಕ್ತಿಯಾಗಿ ಕಠಿಣ ತಪಸ್ಸು ಮಾಡಿದಳು. ಅಂಜನಾ ತಪಸ್ಸಿನಿಂದ ಸಂತೋಷಗೊಂಡ ಶಿವನು: “ನಿನ್ನ ಗರ್ಭದಲ್ಲಿ ನನ್ನ ಅಂಶ ಜನ್ಮ ತಾಳಲಿ” ಎಂದು ವರ ನೀಡಿದನು. ಹೀಗಾಗಿ ಹನುಮಂತನು ಶಿವನ ಅವತಾರ – “ರೂದ್ರಾಂಶ ಸಮ್ಭವ”. ಅದೇ ಸಮಯದಲ್ಲಿ, ರಾಜ ದಶರಥನು ಮಾಡಿದ ಪುತ್ರಕಾಮೇಷ್ಠಿ ಯಜ್ಞದಲ್ಲಿ ಪಡೆದ ಪಾಯಸದ ಒಂದು ಭಾಗವನ್ನು, ದೇವತೆಗಳ ಸೂಚನೆಯ ಮೇರೆಗೆ, ವಾಯುದೇವನು ಅಂಜನಾದೇವಿಯ ಕೈಗೆ ತಲುಪಿಸಿದನು. ಆ ಪಾಯಸವನ್ನು ಸೇವಿಸಿದ ಅಂಜನಾದೇವಿಗೆ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಹನುಮಂತನು ಮಗನಾಗಿ ಜನಿಸಿದನು. ಆದ್ದರಿಂದಲೇ ಇವನನ್ನು ವಾಯುಪುತ್ರ ಎಂದೂ ಕರೆಯಲಾಗುತ್ತದೆ. ಹನುಮಂತನು ಜನಿಸಿದ ಅಥವಾ ಅವತಾರ ತಾಳಿದ ಈ ದಿನ ಹನುಮಜ್ಜಯಂತಿ ಎಂದು ಆಚರಿಸಲಾಗುತ್ತದೆ. ಎರಡನೇದಾಗಿ, ಚಿಕ್ಕ ವಯಸ್ಸಿನಲ್ಲೇ ಮಹಾಜ್ಞಾನಿ ಹಾಗೂ ಪರಾಕ್ರಮಿಯಾದ ಬಾಲಕ ಹನುಮಂತನು ಕೆಂಪಗೆ ಹೊಳೆಯುತ್ತಿದ್ದ ಸೂರ್ಯನನ್ನು ಕೆಂಪು ಹಣ್ಣೆಂದು ಭಾವಿಸಿ “ಅದನ್ನು ತಿನ್ನಬೇಕು!” ಎಂದು ಅತ್ಯಂತ ವೇಗವಾಗಿ ಆಕಾಶಕ್ಕೆ ಹಾರಿದನು. ಈ ಚಿಕ್ಕ ವಾನರನು ಸೂರ್ಯನಿಗೆ ತಾಗಿದರೆ ಜಗತ್ತೇ ಅಸ್ತವ್ಯಸ್ತವಾಗಬಹುದು ಎಂದು ಹೆದರಿದರ ಇಂದ್ರ ದೇವರು ಹನುಮಂತನನ್ನು ತಡೆಯಲು ವಜ್ರಾಯುಧವನ್ನು ಬಾಲಕನ ಮೇಲೆ ಪ್ರಹಾರ ಮಾಡಿದಾಗ, ಪೆಟ್ಟು ತಿಂದ ಹನುಮಂತ ಭೂಲೋಕಕ್ಕೆ ಅಪ್ಪಳಿಸುತ್ತಾನೆ. ಇಂದ್ರನಿಂದ ಮಗನ ಮೇಲೆ ಆದ ಹತ್ಯೆಯಿಂದ ಕೋಪಗೊಂಡ ವಾಯುದೇವರು ಹನುಮಂತನನ್ನು ಕರೆದುಕೊಂಡು ಒಂದು ಗುಹೆಯೊಳಗೆ ಅಂತರ್ಮುಖಿಯಾಗುತ್ತಾನೆ. ವಾಯುದೇವರು ಈ ರೀತಿ ಕೋಪಿತರಾಗಿ ಅಡಗಿಕೊಂಡ ಪರಿಣಾಮ, ಪ್ರಪಂಚಾದ್ಯಂತ ಉಸಿರಾಟದ ತೊಂದರೆ ಉಂಟಾದಾಗ, ದೇವನು ದೇವತೆಗಳು ಬ್ರಹ್ಮದೇವರ ಬಳಿಗೆ ಹೋಗಿ ವಾಯುದೇವರ ಜೊತೆ ಸಂಧಾನ ಮಾಡಬೇಕೆಂದು ಕೋರುತ್ತಾರೆ, ಅವರೆಲ್ಲರ ಇಚ್ಚೆಯಂತೆ ಬ್ರಹ್ಮನು ವಾಯುದೇವರ ಬಳಿಗೆ ಬಂದು ಹನುಮಂತನಿಗೆ ಚಿರಂಜೀವಿಯಾಗುವಂತೆ ಹರಿಸಿದ ದಿನವೇ ಮಾರ್ಗಶಿರ ಮಾಸದ ಶುದ್ಧ ತ್ರಯೋದಶಿ. ಹಾಗಾಗಿ ಆ ದಿನವನ್ನು ಹನುಮದ್‌ ಜಯಂತಿಯಾಗಿ ಆಚರಿಸಲಾಗುತ್ತಾದೆ.

ಮತ್ತೊಂದಷ್ಟು ಕಥೆಗಳ ಪ್ರಕಾರ , ಈ ದಿನ ತಾಯಿ ಸೀತಾದೇವಿಯು ಹನುಮಂತನ ಭಕ್ತಿ ಮತ್ತು ಸಮರ್ಪಣೆಗೆ ಮೆಚ್ಚಿ ಅವನಿಗೆ ಅಮರತ್ವದ (ಚಿರಂಜೀವಿತ್ವ) ವರವನ್ನು ನೀಡಿದಳು ಆ ದಿನವನ್ನು ಹನುಮದ್‌ ಜಯಂತಿಯಾಗಿ ಆಚರಿಸಲಾಗುತ್ತಾದೆ ಎಂದು ಹೇಳಲಾಗುತ್ತದೆ.

ಹನುಮನ ಜನ್ಮಸ್ಥಳವಾದ ಕರ್ನಾಟಕದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿಯೂ ಹನುಮ ಮಾಲಾಧಾರಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಹನುಮದ್‌ ಜಯಂತಿಯನ್ನು ಆಚರಿಸಲ್ಪಡುತ್ತದೆ.

Leave a Comment

Your email address will not be published. Required fields are marked *

Scroll to Top