
ಸೂರ್ಯ ದೇವರು ಪ್ರತಿವರ್ಷ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕ್ಷಣವನ್ನು “ಸಂಕ್ರಮಣ” ಎನ್ನಲಾಗತ್ತೆ. ಸೂರ್ಯನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸುವ ಕ್ಷಣ ಅತ್ಯಂತ ಪವಿತ್ರ. ಅದೇ ತುಲಾ ಸಂಕ್ರಮಣ.
ವೈಜ್ಞಾನಿಕವಾಗಿ seintiyficaly ಹೇಳೋದಾದ್ರೆ, ಭೂಮಿಯು ಸೂರ್ಯನ ಸುತ್ತ ಏಲಿಪ್ಟಿಕಲ್ (elliptical) ಮಾರ್ಗದಲ್ಲಿ ಸುತ್ತುತ್ತದೆ. ಆದರೆ ಭೂಮಿಯ ದೃಷ್ಟಿಯಿಂದ ನೋಡಿದಾಗ, ಸೂರ್ಯನು ಪ್ರತಿವರ್ಷ 12 ರಾಶಿಗಳ (360° ವೃತ್ತದ) ಮೂಲಕ ಚಲಿಸುವಂತೆ ಕಾಣುತ್ತದೆ. ಇದರಲ್ಲಿ ಸೂರ್ಯನು ಒಂದು ರಾಶಿಯಿಂದ (30° ವಿಭಾಗ) ಮತ್ತೊಂದು ರಾಶಿಗೆ ಪ್ರವೇಶಿಸುವ ಸಮಯ “ಸಂಕ್ರಮಣ” ಅಂದ್ರೆ — ಸೂರ್ಯನ ದೀಕ್ಷಿತ ರೇಖಾಂಶ (longitude) ಒಂದು ರಾಶಿಯಿಂದ ಇನ್ನೊಂದಕ್ಕೆ ಬದಲಾಗುವ ಕ್ಷಣ.
ತುಲಾ (Libra) ಅಂದರೆ “ತೂಕ” ಅಥವಾ “ಸಮತೋಲನ” ಎಂಬ ಅರ್ಥ. ಈ ಸಮಯದಲ್ಲಿ ಸೂರ್ಯನು ಭೂಮಿಯು ಸೂರ್ಯನ ಸುತ್ತ ಚಲಿಸುವ ಕಕ್ಷೆಯಲ್ಲಿ ಸಮಭಾಜಕ ರೇಖೆಯ (Equator) ಹತ್ತಿರ ಬರುತ್ತಾನೆ. ಆದ್ದರಿಂದ ದಿನ ಮತ್ತು ರಾತ್ರಿ ಸಮಾನ (almost equal) ಆಗಿರುತ್ತವೆ.
ಭಾರತೀಯ ಕ್ಯಾಲೆಂಡರ್ನಲ್ಲಿ ಅದು ತುಲಾ ಸಂಕ್ರಮಣಕ್ಕೆ ತಕ್ಕ ಸಮಯ ಸಾಮಾನ್ಯವಾಗಿ ಅಶ್ವಯುಜ ಮಾಸದ ಮಧ್ಯಭಾಗದಲ್ಲಿ (ಅಕ್ಟೋಬರ್ ತಿಂಗಳಲ್ಲಿ) ಬರುತ್ತದೆ. ಸೂರ್ಯ ದೇವರ ಸಂಕ್ರಮಣದಿಂದ ಕಾವೇರಿ ದೇವಿಯ ಜನ್ಮದ ಕಥೆ ತನಕ — ಎಲ್ಲದರ ಹಿಂದಿದೆ ಪ್ರಕೃತಿಯ ಅದ್ಭುತ ಸಮತೋಲನವಿದೇ.
ಪುರಾಣದ ಪ್ರಕಾರ, ಬ್ರಹ್ಮನ ಮಾನಸ ಪುತ್ರಿಯದ ಲೋಪಾಮುದ್ರೆಯು , ಕಾವೇರ ಋಷಿಯ ಮಗಳಾಗಿ ಕಾವೇರಿಯಾ ರೂಪದಲ್ಲಿ ಭೂಮಿಗೆ ಅವತರಿಸಿ, ಭೂಮಿಯ ಮೇಲೆ ಬರ, ದೌರ್ಬಲ್ಯ ಮತ್ತು ಪಾಪಗಳು ಹೆಚ್ಚಾಗುತ್ತಿದ್ದಾಗ, ತನ್ನ ದೈವೀ ಶಕ್ತಿಯಿಂದ ನದಿಯಾಗಿ ಪರಿವರ್ತನೆಗೊಂಡ ಕಾವೇರಿ, ಭೂಮಿಯಲ್ಲಿ ಹರಿಯಲು ಆರಂಭಿಸಿದ ದಿನ ಕೂಡ ಇದೇ ತುಲಾ ಸಂಕ್ರಮಣದಂದು .
ಆದ್ದರಿಂದ “ತುಲಾ ಸಂಕ್ರಮಣ ಪುಣ್ಯಕಾಲ”ದಂದು ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ, ಜನ್ಮಜನ್ಮಾಂತರದ ಪಾಪಗಳು ಕ್ಷಯವಾಗುತ್ತವೆ ಎಂದು ಹೇಳಲಗತ್ತೆ. ಈ ದಿನದಂದು ಭಕ್ತರು ತಲಕಾವೇರಿ, ಭಗಮಂಡಲ, ಶ್ರೀರಂಗಪಟ್ಟಣ ತ್ರಿವೇಣಿ ಸಂಗಮ ಮೊದಲಾದ ಪುಣ್ಯ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನ, ಪೂಜೆ ಸಲ್ಲಿಸುವುದು ತುಂಬ ವಿಶೇಷ .
ತುಲಾ ಸಂಕ್ರಮಣವು ಕೇವಲ ಸೂರ್ಯನ ರಾಶಿ ಬದಲಾವಣೆಯ ಕ್ಷಣ ಮಾತ್ರವಲ್ಲ — ಇದು ಪ್ರಕೃತಿಯ ಪವಿತ್ರತೆಯ ಸ್ಮರಣೆ ಮಾಡುವ ಮೂಲಕ ದೇವರ ಕೃಪೆ ಪಡೆಯಲು ಅತ್ಯಂತ ಶುಭ ಕಾಲ. ಮಳೆಗಾಲ ಮುಗಿದು, ಶುದ್ಧ ಪ್ರಕೃತಿಯ ಕಾಲ, ಬೆಳಕಿನ, ಸಮತೋಲನದ ಮತ್ತು ಆಧ್ಯಾತ್ಮಿಕ ಶಾಂತಿಯ ಋತು ಶರದೃತುವಿನ ಶುಭಾರಂಭವಗೋದು ಇದೇ ತುಲಾ ಸಂಕ್ರಮಣದ ಸಮಯದಲ್ಲಿ.
