
‘ವೈಕುಂಠ ಏಕಾದಶಿʼ ಹಿಂದೂ ಧರ್ಮದಲ್ಲಿ ಏಕಾದಶಿಗೆ ಯಾಕಿಷ್ಟು ಮಹತ್ವವಿದೆ ಅಂತ ಬನ್ನಿ ನೋಡೋಣ. ಹೌದು ಏಕಾದಶಿ ಅಂದರೇ ಏನು? ಏಕಾದಶಿಯು ಸಂಸ್ಕೃತದ ಏಕಾದಶ ಎಂಬ ಪದದಿಂದ ಬಂದಿದೆ, (ಏಕ-ಒಂದು,ದಶ-ಹತ್ತು).ಒಟ್ಟಾರೇ ‘ಏಕಾದಶಿ’ ಎಂದರೆ ಹನ್ನೊಂದು ಎಂದು ಅರ್ಥ. ಪ್ರತಿ ತಿಂಗಳು ಕೃಷ್ಣ ಪಕ್ಷದಲ್ಲಿ ಒಂದು ಮತ್ತು ಶುಕ್ಲ ಪಕ್ಷದಲ್ಲಿ ಒಂದು – ಹೀಗೆ ವರ್ಷಕ್ಕೆ ಒಟ್ಟು 24 ಏಕಾದಶಿಗಳು ಬರುತ್ತವೆ. ಆದರೆ, ಈ ಎಲ್ಲಾ ಏಕಾದಶಿಗಳಲ್ಲಿ ಬಹಳ ವೀಶೇಷವಾದ್ದು ಧನುರ್ಮಾಸದಲ್ಲಿ ಬರುವ ‘ವೈಕುಂಠ ಏಕಾದಶಿ’ ಇದನ್ನು ‘ಮೋಕ್ಷದ ಏಕಾದಶಿ’ ಅಂತ ಕೂಡ ಕರಿತ್ತಾರೆ.
ಪುರಾಣಗಳ ಪ್ರಕಾರ, ಈ ಪವಿತ್ರ ದಿನದಂದು ವೈಕುಂಠದ ಬಾಗಿಲುಗಳು ತೆರೆದಿರುತ್ತವೆ. ಅಂದು ಯಾರು ಭಕ್ತಿಯಿಂದ ಉಪವಾಸವಿದ್ದು, ಹರಿನಾಮ ಸ್ಮರಣೆ ಮಾಡುತ್ತಾರೋ ಅವರಿಗೆ ಭಗವಂತನ ನೇರ ದರ್ಶನಭಾಗ್ಯ ದೊರೆಯುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೇ, ಈ ದಿನದಂದು ಮರಣ ಹೊಂದಿದವರು ನೇರವಾಗಿ ಭಗವಂತನ ಪಾದ ಸೇರುತ್ತಾರೆ ಮತ್ತು ಅವರಿಗೆ ಮೋಕ್ಷ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ಈ ದಿನಕ್ಕೆ ‘ಏಕಾದಶಿ’ ಎಂಬ ಹೆಸರು ಹೇಗೆ ಬಂತು ಎಂಬುದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ವಿಷ್ಣುಪುರಾಣದ ಪ್ರಕಾರ, ಹಿಂದೆ ‘ಮುರ’ ಎಂಬ ಭೀಕರ ಅಸುರನಿದ್ದನು. ಅವನ ಕಾಟಕ್ಕೆ ದೇವತೆಗಳು ತತ್ತರಿಸಿ ಹೋಗಿದ್ದರು. ರಕ್ಷಣೆಗಾಗಿ ದೇವತೆಗಳು ಶ್ರೀಹರಿಯ ಮೊರೆ ಹೋಗ್ತಾರೆ, ಆಗ ವಿಷ್ಣು ಮುರನ ವಿರುದ್ಧ ಯುದ್ಧ ಸಾರುತ್ತಾನೆ. ಈ ಯುದ್ಧವು ಬಹಳ ದೀರ್ಘಕಾಲ ನಡೆಯುತ್ತೆ. ಮುರಾಸುರನು ಅಪ್ರತಿಮ ಬಲಶಾಲಿಯಾಗಿದ್ದರಿಂದ ಯುದ್ಧ ಬಹಳಷ್ಟು ಸಮಯ ನಡೆದು ಯಾರಿಗೂ ಜಯ ಸಿಗದೇ ಕೊನೆಗೆ ವಿಷ್ಣುವು ಸ್ವಲ್ಪ ವಿಶ್ರಾಂತಿಗೆ ನಿದ್ರಿಸುತ್ತಾನೆ. ಆಗ ವಿಷ್ಣು ನಿದ್ರೆಯಲ್ಲಿದ್ದಾಗ ಅವನನ್ನು ಕೊಲ್ಲಲು ಮುರಾಸುರ ಹೊಂಚು ಹಾಕುತ್ತಾನೆ. ಆ ಸಮಯದಲ್ಲಿ ಆತನ ದೇಹದಿಂದ ಆತನದ್ದೇ ಆದ ಒಂದು ಸ್ತ್ರೀ ಶಕ್ತಿ(ಹೆಣ್ಣಿನ ಅಂಶ), ವಿಷ್ಣುವಿನ 11 ನೇ ಇಂದ್ರಿಯವಾದ (ಮನಸ್ಸು)ನಿಂದ ಹೊರಬಂದು ಮುರನನ್ನು ಸಂಹಾರ ಮಾಡುತ್ತಾಳೆ. ಇದನ್ನೇ ವಿಷ್ಣುವಿನ ‘ಫೆಮಿನೈನ್ ಎನರ್ಜಿ’ ಎಂದು ಕರೆಯಲಾಗುತ್ತದೆ. ಆಕೆಯ ತೀಕ್ಷ್ಣ ದೃಷ್ಟಿಗೆ ಮುರ ಸುಟ್ಟು ಭಸ್ಮವಾಗುತ್ತಾನೆ. ವಿಷ್ಣು ಎಚ್ಚರಗೊಂಡಾಗ, ತನ್ನ ದೇಹದಿಂದಲೇ ಹೊರ ಬಂದ ಆ ಶಕ್ತಿಯ ಸಾಹಸಕ್ಕೆ ಮೆಚ್ಚಿ ಆಕೆಗೆ ‘ಏಕಾದಶಿ’ ಎಂದು ಹೆಸರಿಡುತ್ತಾನೆ. ಅಲ್ಲದೆ, ನಿನಗೆ ಏನು ವರ ಬೇಕು ಎಂದು ಕೇಳುತ್ತಾನೆ.
ಆಗ ಏಕಾದಶಿ ದೇವಿಯು “ಪ್ರಭು, ನಾನು ಮುರನನ್ನು ಸಂಹಾರ ಮಾಡಿದ ಈ ದಿನದಂದು ನಿನ್ನನ್ನು ಆರಾಧಿಸುವ ಎಲ್ಲಾ ಭಕ್ತರಿಗೆ ವೈಕುಂಠದ ದ್ವಾರ ತೆರೆದಿರಲಿ, ಅವರ ಪಾಪಗಳೆಲ್ಲ ತೀರಿ ಅವರಿಗೆ ಮೋಕ್ಷ ಸಿಗಲಿ. ಎಂದು ಕೇಳಿಕೊಳ್ಳುತ್ತಾಳೆ. ಅಂದಿನಿಂದ ಏಕಾದಶಿಯ ಕೋರಿಕೆಯಂತೆ ಈ ದಿನ ‘ವೈಕುಂಠ ಏಕಾದಶಿ’ಯಾಯಿತು. ಅಂದು ಜನರು ವೈಕುಂಟ ವಾಸಿ ಶ್ರೀಹರಿಯ ದರ್ಶನ ಪಡೆದು ಧಾನ್ಯರಾಗುತ್ತರೆ. ಉಪವಾಸ ಮತ್ತು ಜಾಗರಣೆ ಮಾಡುವ ಮೂಲಕ ಭಗವಂತನ ಕೃಪೆ ಪಾತ್ರರಾಗುತ್ತರೆ. ಈ ದಿನದಂದ್ದು ಸರ್ವರಿಗೂ ವೈಕುಂಟದ ಬಾಗಿಲು ತೆರೆದೆಯಿರುತ್ತದೆ.
