# Kirunota ## Posts - [ಮಹಿಳೆಯರಿಗೆ ಗೌರವ ಸಲ್ಲಿಸೋದಕ್ಕೆ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ.](https://kirunota.online/%e0%b2%ae%e0%b2%b9%e0%b2%bf%e0%b2%b3%e0%b3%86%e0%b2%af%e0%b2%b0%e0%b2%bf%e0%b2%97%e0%b3%86-%e0%b2%97%e0%b3%8c%e0%b2%b0%e0%b2%b5-%e0%b2%b8%e0%b2%b2%e0%b3%8d%e0%b2%b2%e0%b2%bf%e0%b2%b8%e0%b3%8b%e0%b2%a6/): ಮನೆ ಬೆಳಗಲು ದೀಪ ಬೇಕು ಎನ್ನುತ್ತಾರೆ, ಆದರೆ ಆ ದೀಪ ಬೆಳಗಲು ತನ್ನನ್ನೇ ಎಣ್ಣೆ-ಬತ್ತಿಯಾಗಿ ಸವೆಸುವ ಅದಮ್ಯ ಚೇತನವೇ ಹೆಣ್ಣು. ಅವಳು ಕೇವಲ ಪಾತ್ರಗಳಲ್ಲಲ್ಲ, ಬದಲಿಗೆ ಆ ಪ್ರತಿ ಪಾತ್ರಕ್ಕೂ ಜೀವ ತುಂಬುವ ಪ್ರಾಣಶಕ್ತಿ. ಅವಳು ಹುಟ್ಟಿದಾಗ ‘ಮಗಳು‘, ಬೆಳೆದಾಗ ‘ಸಹೋದರಿ‘, ಅಡಿಯಿಟ್ಟಾಗ ‘ಮನೆಮಗಳು‘, ಜೀವನ ಹಂಚಿಕೊಂಡಾಗ ‘ಹೆಂಡತಿ‘, ಕೊನೆಗೆ ಜಗತ್ತನ್ನೇ ಸಲಹುವ ‘ತಾಯಿ‘. ಅವಳ ಪಾತ್ರಗಳು ಬದಲಾಗಬಹುದು, ಆದರೆ ಅವಳ ಪ್ರೀತಿಯ ಆಳ ಮಾತ್ರ ಎಂದಿಗೂ ಬದಲಾಗಲ್ಲ.”  ಲೋಕದ ದೃಷ್ಟಿಯಲ್ಲಿ ಅವಳು ಅಬಲೆಯಾಗಿ ಕಾಣಿಸಬಹುದು, ಆದರೆ ಜವಾಬ್ದಾರಿಯ ಬೆಟ್ಟ ಹೆಗಲೇರಿದಾಗ ಅವಳು ತೋರುವ ಸ್ಥೈರ್ಯಕ್ಕೆ ಸಾಟಿಯೇ ಇಲ್ಲ. ಅವಳ ಮೌನ ಸೋಲಲ್ಲ, ಅದು ಅವಳ ಸಹನಾ ಶಕ್ತಿಯ ಸಾಕ್ಷಿ. ಕಣ್ಣೀರು ಸುರಿಸಿದರೂ ಮುರಿಯದ ಮನಸ್ಸು ಅವಳದು. ದಣಿದರೂ ಗುರಿ ತಲುಪುವವರೆಗೂ ನಿಲ್ಲದ ಹಠ ಅವಳದು. ಎದೆಯೊಳಗೆ ನೋವಿನ ಸಮುದ್ರವಿದ್ದರೂ, ಮುಖದಲ್ಲಿ ಮಂದಹಾಸ ಧರಿಸಿ ಇಡೀ ಮನೆಗೆ ಶಾಂತಿ ನೀಡುವ ಮಾಂತ್ರಿಕತೆ ಅವಳಿಗೆ ಮಾತ್ರ ಸಾಧ್ಯ. ಅವಳು ಕನಸು ಕಾಣುತ್ತಾಳೆ — […] - [ಶಿವರಾತ್ರಿ ಮಹಿಮೆ: ಪಾರ್ವತಿ ತಪಸ್ಸು, ಹಾಲಾಹಲ ವಿಷ, ದಿವ್ಯ ಲಿಂಗೋದ್ಭವ ಕಥೆ!](https://kirunota.online/%e0%b2%b6%e0%b2%bf%e0%b2%b5%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf-%e0%b2%ae%e0%b2%b9%e0%b2%bf%e0%b2%ae%e0%b3%86-%e0%b2%aa%e0%b2%be%e0%b2%b0%e0%b3%8d%e0%b2%b5%e0%b2%a4%e0%b2%bf/): ಶಿವರಾತ್ರಿ ಹೆಸರಿನಲ್ಲೆ ಇದೆ ಶಿವನ ರಾತ್ರಿ ಎಂದು, ಇದು ಕೈಲಾಸವಾಸಿ ಶಿವನ ದಿನ. ಶಿವನಾಮ ಸ್ಮರಣೆಯಲ್ಲೇ ಈ ರಾತ್ರಿ ಕಳೆಯುವುದರಿಂದ ಇದನ್ನು ‘ಶಿವರಾತ್ರಿ’ ಎಂದು ಕರೆಯಲಾಗುತ್ತದೆ. ಇದು ಕೈಲಾಸವಾಸಿ ಶಿವನಿಗೆ ಅತ್ಯಂತ ಪ್ರಿಯವಾದ ದಿನ. ಈ ದಿನದಂದು ಭಕ್ತರೆಲ್ಲರೂ ಆ ಪರಮಶಿವನಿಗೆ ಅಭಿಷೇಕ, ಉಪವಾಸ, ಜಾಗರಣೆ ಹಾಗೂ ಶಿವಭಜನೆ ಮಾಡುವ ಮೂಲಕ ಆ ನೀಲಕಂಠನ ಭಕ್ತಿಗೆ ಪಾತ್ರರಾಗುತ್ತಾರೆ. ಆದರೆ ಈ ದಿನವನ್ನೇ ಶಿವರಾತ್ರಿಯಾಗಿ ಏಕೆ ಆಚರಿಸುತ್ತೇವೆ ಗೊತ್ತಾ? ಪಾರ್ವತಿ ಮತ್ತು ಶಿವನ ವಿವಾಹ ಪಾರ್ವತಿಯು ಆ ಪರಮಶಿವನನ್ನು ವರಿಸಿದ ದಿನವೇ ಶಿವರಾತ್ರಿ. ಹಿಮವಂತನ ಮಗಳಾದ ಪಾರ್ವತಿ ದೇವಿಯು ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿ, ಈ ದಿನದಂದು  ರಾತ್ರಿಯಿಡೀ  ಶಿವನಾಮ ಜಪಿಸುತ್ತಾ, ತಪಸ್ಸು ಮಾಡಿ ಶಿವನನ್ನು ವಿವಾಹವಾದರೆಂಬ ಉಲ್ಲೇಖವು ಶಿವಪುರಾಣದಲ್ಲಿದೆ. ಸಮುದ್ರ ಮಂಥನ ಮತ್ತು ವಿಷಪಾನ ದೇವತೆಗಳು ಹಾಗೂ ಅಸುರರ ನಡುವೆ ಅಮೃತ ಪಡೆಯಲು ‘ಸಮುದ್ರ ಮಂಥನ’ ನಡೆಯುತ್ತದೆ. ಅಮೃತಕ್ಕಿಂತ ಮೊದಲು ಹಾಲಾಹಲವೆಂಬ ಭಯಂಕರ ವಿಷ ಉದ್ಭವವಾದಾಗ, ಲೋಕ ಕಲ್ಯಾಣಕ್ಕಾಗಿ ಶಿವನು […] - ['ಸದ್ಧಲೇ'.. ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ: ಏಳುಕೋಟಿ ವಿಜಯದ ರೋಚಕ ಕಥೆ!](https://kirunota.online/%e0%b2%b8%e0%b2%a6%e0%b3%8d%e0%b2%a7%e0%b2%b2%e0%b3%87-%e0%b2%ae%e0%b3%88%e0%b2%b2%e0%b2%be%e0%b2%b0%e0%b2%b2%e0%b2%bf%e0%b2%82%e0%b2%97%e0%b3%87%e0%b2%b6%e0%b3%8d%e0%b2%b5%e0%b2%b0%e0%b2%a8/): ಉತ್ತರ ಕರ್ನಾಟಕದ ವಿಜಯನಗರ  ಜಿಲ್ಲೆಯ,  ತುಂಗಾಭದ್ರ ನದಿತೀರದ ಸಮೀಪದಲ್ಲಿರುವ  ಮೈಲಾರ ಕ್ಷೇತ್ರ . ಲಕ್ಷಾಂತರ ಭಕ್ತರು ಅರಿಶಿನದ ಬಣ್ಣದಲ್ಲಿ ಮಿಂದೇಳುವ, ‘ಸದ್ಧಲೇ’ ಎಂಬ ಒಂದು ನುಡಿಗೆ ಇಡೀ ರಾಜ್ಯವೇ ಕಾಯುವ ಆ ಅದ್ಭುತ ಕ್ಷಣವೇ. ಭರತ ಹುಣ್ಣಿಮೆಯ ಮೈಲಾರಲಿಂಗೇಶ್ವರನ ಜಾತ್ರೆ ಮತ್ತು ‘ಕಾರ್ಣಿಕೋತ್ಸವ’. ಇದೇ ಫೆಬ್ರವರಿ 1, ಮೈಲಾರಲಿಂಗೇಶ್ವರನ ಜಾತ್ರೆ ನಡೆಯಲಿದ್ದು, ಮರುದಿನ ಫೆಬ್ರವರಿ 2 ರಂದು ‘ಕಾರ್ಣಿಕೋತ್ಸವ’ ಇದೆ. ಈ ಕ್ಷೇತ್ರದ ಇತಿಹಾಸ ಮತ್ತು ಮೈಲಾರಲಿಂಗೇಶ್ವರನು ಅವತಾರವೆತ್ತಿದ ಕಥೆ ತುಂಬಾನೇ ರೋಚಕವಾಗಿದೆ. ಮಣಿ ಮತ್ತು ಮಲ್ಲಾಸುರ ಎಂಬ ಇಬ್ಬರು ರಾಕ್ಷಸ ಸಹೋದರರು ಬ್ರಹ್ಮನಿಂದ ವರವನ್ನು ಪಡೆದು ಅತ್ಯಂತ ಶಕ್ತಿಶಾಲಿಗಳಾಗಿರುತ್ತಾರೆ. ಈ ಅಸುರರು ಭೂಲೋಕದ ಋಷಿಮುನಿಗಳಿಗೆ ಮತ್ತು ದೇವತೆಗಳಿಗೆ ವಿಪರೀತ ತೊಂದರೆ ಕೋಡೊಕೆ ಆಂಭಸ್ತಾರೆ. ಅವರ ಅಹಂಕಾರ ಮಿತಿಮೀರಿ, ಸಪ್ತರ್ಷಿಗಳ ತಪಸ್ಸಿಗೆ ಭಂಗ ಬಂದಾಗ. ದೇವತೆಗಳು ಮತ್ತು ಋಷಿಗಳು ಅಸುರರ ಕಾಟ ತಾಳಲಾರದೆ ಭಗವಾನ್ ಶಿವನ ಮೊರೆ ಹೋಗುತ್ತಾರೆ. ಆಗ ಭಗವಂತನು ದುಷ್ಟ ಸಂಹಾರಕ್ಕಾಗಿ ‘ಮಾರ್ತಾಂಡ ಭೈರವ‘ (ಮೈಲಾರಲಿಂಗೇಶ್ವರನಾಗಿ ಅವತಾರ ತಾಳಿದ […] - [ವಿಭಿನ್ನ ಇತಿಹಾಸ ಮತ್ತು ಅರ್ಥವನ್ನು ಹೊಂದಿರುವ "ಭಾರತ" ಮತ್ತು "ಇಂಡಿಯಾ" ಎಂಬ ಎರಡು ವಿಭಿನ್ನ ಹೆಸರು ಹೇಗೆ ಬಂತು?](https://kirunota.online/%e0%b2%b5%e0%b2%bf%e0%b2%ad%e0%b2%bf%e0%b2%a8%e0%b3%8d%e0%b2%a8-%e0%b2%87%e0%b2%a4%e0%b2%bf%e0%b2%b9%e0%b2%be%e0%b2%b8-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%85%e0%b2%b0%e0%b3%8d/): ನಾವು ಒಂದೇ ದೇಶವನ್ನು ಸೂಚಿಸಲು, ವಿಭಿನ್ನ ಇತಿಹಾಸ ಮತ್ತು ಅರ್ಥವನ್ನು ಹೊಂದಿರುವ ಭಾರತ ಮತ್ತು ಇಂಡಿಯಾ ಎಂಬ ಎರಡು ವಿಭಿನ್ನ ಹೆಸರುಗಳನ್ನು ಬಳಸುತ್ತೇವೆ. ನಮ್ಮ ದೇಶಕ್ಕೆ ಈ ಹೆಸರುಗಳು ಹೇಗೆ ಬಂತು ಎಂದು ತಿಳಿಯೋಣ. ಭಾರತ’ ಎಂಬ ಹೆಸರು ದೇಶದ ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ಹೆಸರು. ಇದು ಪ್ರಾಚೀನ ಭಾರತೀಯ ಗ್ರಂಥಗಳು ಮತ್ತು ಮಹಾಕಾವ್ಯಗಳಾದ ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾದ ಪೌರಾಣಿಕ ಚಕ್ರವರ್ತಿ *’ಭರತ’*ನಿಂದ ಬಂದಿದೆ ಎನ್ನಲಾಗುತ್ತದೆ. ಅವನ ಸಾಮ್ರಾಜ್ಯವು ಇಡೀ ಭಾರತ ಉಪಖಂಡವನ್ನು ಒಳಗೊಂಡಿತ್ತು. ಭರತನು ಧರ್ಮನಿಷ್ಠ ಮತ್ತು ಪ್ರಬಲ ರಾಜನಾಗಿದ್ದನು, ಭರತ ಚಕ್ರವರ್ತಿಯ ಆಳ್ವಿಕೆಯ ಕಾರಣದಿಂದ ಈ ಭೂಮಿಗೆ ‘ಭರತವರ್ಷ’ ಅಥವಾ ‘ಭರತಖಂಡ’ ಎಂಬ ಹೆಸರು ಬಂದಿತು. ಕಾಲಾಂತರದಲ್ಲಿ ‘ಭಾರತ‘ ಎಂದು ಬಳಕೆಗೆ ಬಂದಿತು. ಇಂಡಿಯಾ ಎಂಬ ಹೆಸರು ಬರಲು ಮೂಲ ಕಾರಣ (ಕ್ರಿ.ಶ. 500-1800) ಅವಧಿಯಲ್ಲಿ ಬಂದ ಪ್ರಾಚೀನ ಪರ್ಷಿಯನ್ನರು ಸಿಂಧೂ ನದಿಯ ಆಚೆಗಿನ ಪ್ರದೇಶವನ್ನು ‘ಹಿಂದ್’ ಅಥಾವ ಹಿಂದೂಸ್ಥಾನ್ ಎಂದು ಕರೆದರು, 18ನೇ ಶತಮಾನದಿಂದ […] - ['ಮಕರ ಸಂಕ್ರಾಂತಿ' ಹೊಸ ವರ್ಷದ ಮೊದಲ ಹಬ್ಬದ ಸಂಭ್ರಮ. 'ಉತ್ತರಾಯಣ'ದ ಆರಂಭ.](https://kirunota.online/%e0%b2%ae%e0%b2%95%e0%b2%b0-%e0%b2%b8%e0%b2%82%e0%b2%95%e0%b3%8d%e0%b2%b0%e0%b2%be%e0%b2%82%e0%b2%a4%e0%b2%bf-%e0%b2%b9%e0%b3%8a%e0%b2%b8-%e0%b2%b5%e0%b2%b0%e0%b3%8d%e0%b2%b7%e0%b2%a6-%e0%b2%ae/): ಸಂಕ್ರಾಂತಿ ಬಂತೆಂದರೆ ಸಾಕು ನಾಡಿನೆಲ್ಲೆಡೆ ಹೊಸ ಸಂಭ್ರಮ. ಸೂರ್ಯನು ತನ್ನ ಪಥವನ್ನು ಬದಲಿಸಿ ನಮ್ಮ ಬದುಕಿನಲ್ಲಿ ಹೊಸ ಬೆಳಕು ತರುವ ಈ ಹಬ್ಬದ ಹಿಂದೆ ಅದೆಷ್ಟು ಅದ್ಭುತ ಕಥೆಗಳಿವೆ ಅಂತ ನಿಮಗೆ ಗೊತ್ತ? ಸಂಕ್ರಾಂತಿ  ಸಂ- ಅಂದರೇ ಸಂತೋಷ/ಸದ್ಬುದ್ಧಿ, ಕ್ರಾ- ಅಂದರೆ ಬದಲಾವಣೆ, ಂತಿ- ಅಂದರೇ ತೃಪ್ತಿ/ಶಾಂತಿ) ಅನ್ನೋ ಅರ್ಥ ಹೌದು ಪ್ರತಿ ರೈತ ತನು ವರ್ಷವಿಡಿ ಕಷ್ಟಪಟ್ಟು ಬೆಳೆದ ರಾಶಿಯನ್ನ ತೃಪ್ತಿ/ಶಾಂತಿ ತನ್ನ ಮನೆಗೆ ತಗೊಂಡೊಗೊ ಸಂತಸದ ದಿನನೇ ಸಂಕ್ರಾಂತಿ .  ಸಂಕ್ರಾಂತಿ ಪದದಲ್ಲೇ ಇದೆ  ‘ಸಂಕ್ರಮಣ’ ಅಥವಾ ಬದಲಾವಣೆ ಅಂತ.ಇದೇ ಸಮಯ  ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸೋದು ಎನ್ನಲಾಗುತ್ತದೆ ಇದೇ ‘ಮಕರ ಸಂಕ್ರಾಂತಿ’. ಈ ದಿನದಿಂದ ‘ಉತ್ತರಾಯಣ’ ಪುಣ್ಯಕಾಲ ಆರಂಭವಾಗುತ್ತದೆ. ಹೌದು ಸೂರ್ಯನು ಕರ್ಕಾಟಕ ರಾಶಿಯಿಂದ ಮಕರ ರಾಶಿಯವರೆಗೆ ಚಲಿಸುವ ಕಾಲವನ್ನು ‘ದಕ್ಷಿಣಾಯಣ’ ಎನ್ನಲಾಗುತ್ತದೆ. ಆದರೆ, ಮಕರ ಸಂಕ್ರಮಣದಿಂದ ಕರ್ಕಾಟಕ ರಾಶಿಯವರೆಗಿನ ಚಲನೆಯನ್ನು ‘ಉತ್ತರಾಯಣ’ ಎಂದು ಕರೆಯುತ್ತೇವೆ. ಈ ಉತ್ತರಾಯಣ ಕಾಲವು ಬಹಳ ಪುಣ್ಯದಾಯಕವಾದುದು ಎಂದು […] - [ಆದಿಶೇಷ ಮತ್ತು ಗರುಡ ಸಹೋದರರಾ? ವಿಷ್ಣುವಿನ ವಾಹನ–ಹಾಸಿಗೆ ಹಿಂದೆ ಇರುವ ಅಸಾಧ್ಯ ಸತ್ಯ!](https://kirunota.online/%e0%b2%85%e0%b2%b8%e0%b2%be%e0%b2%a7%e0%b3%8d%e0%b2%af-%e0%b2%b8%e0%b2%a4%e0%b3%8d%e0%b2%af-%e0%b2%a8%e0%b2%be%e0%b2%97%e0%b2%b0%e0%b2%be%e0%b2%9c%e0%b2%ae%e0%b2%a4%e0%b3%8d%e0%b2%a4%e0%b3%81/): ನಮಸ್ತೇ, ನಿಮ್ಗ್‌ ಗೊತ್ತಾ ನಾಗ ರಾಜ ಮತ್ತು ಪಕ್ಷಿ ರಾಜ ಅಂದರೇ ಆದಿಶೇಷ ಮತ್ತು ಗರುಡ ಇವರಿಬ್ಬರೂ ಸಹೋದರರ? ಹೌದು ಅಂತದ್ರೇ ಅದ್‌ ಹೇಗೆ ಬನ್ನಿ ತಿಳಿಯೋಣ ಇವತ್ತಿನ ವೀಡಿಯೋದಲ್ಲಿ.  ಅಸಾಧ್ಯ ಅನ್ನಿಸಿದರು ಇದು ಸತ್ಯ ಆದಿಶೇಷ ಮತ್ತು ಗರುಡ, ಇವರಿಬ್ಬರೂ ಮಹರ್ಷಿ ಕಶ್ಯಪರ ಇಬ್ಬರೂ ಪತ್ನಿಯರದ ಕದ್ರು ಮತ್ತು ವಿನತೆಯ ಮಕ್ಕಳು. ಕದ್ರು ನಾಗಗಳ ತಾಯಿ. ವಿನತೆ ( ಗರುಡ ಪಕ್ಷಿಗಳ ತಾಯಿ) ಕದ್ರು ಮತ್ತು ವಿನತೆ ಇಬ್ಬರೂ ಅಕ್ಕ-ತಂಗಿಯರು, ಕದ್ರು ತೀಕ್ಷ್ಣ, ಅಹಂಕಾರಭರಿತ ಸ್ಪರ್ಧೆಯ, ಕುಟಿಲ ವಂಚನೆಯ ತಂತ್ರಗಳನ್ನು ಬಳಸುವುದಕ್ಕೂ ಹಿಂಜರಿಯದ ಸ್ವಭಾವದವಳಗಿದ್ದಳು. ಕದ್ರು ತನ್ನ ಸಂತಾನದ ಶಕ್ತಿ ಮತ್ತು ಸಂಖ್ಯೆಯಿಂದ ಅಹಂಕಾರದಿಂದ ವರ್ತಿಸಿದಳು. ಅದರೇ ವಿನತೆ ಸರಳ, ಸಹನಶೀಲ ಮತ್ತು ಧರ್ಮನಿಷ್ಠ ಸ್ವಭಾವದವಳಗಿದ್ದಳು. ವಿನತೆಯ ಸಂತಾನವು ತಡವಾಗಿ ಜನಿಸಿದ್ದು, ಮೊದಲಿಗೆ ಅವಳು ಅವಮಾನ ಮತ್ತು ನಿರಾಶೆ ಅನುಭವಿಸಬೇಕಾಗಿ ಬಂದ್ದಿತ್ತು. ಇದರಿಂದ ಕದ್ರುವಿನ ಗರ್ವದಿಂದ, ವಿನತೆಗೆ ನೋವು ಉಂಟಾಗುತ್ತತ್ತು. ಈ ಕಾರಣ ಅವರ ನಡುವೆ ಸ್ಪರ್ಧೆ ಮತ್ತು ವೈರತ್ವ […] - ["ವೈಕುಂಠ ಏಕಾದಶಿ" ಅಥಾವ 'ಮೋಕ್ಷದ ಏಕಾದಶಿ' ಮಹತ್ವ](https://kirunota.online/%e0%b2%b5%e0%b3%88%e0%b2%95%e0%b3%81%e0%b2%82%e0%b2%a0-%e0%b2%8f%e0%b2%95%e0%b2%be%e0%b2%a6%e0%b2%b6%e0%b2%bf-%e0%b2%85%e0%b2%a5%e0%b2%be%e0%b2%b5-%e0%b2%ae%e0%b3%8b%e0%b2%95%e0%b3%8d%e0%b2%b7/): ‘ವೈಕುಂಠ ಏಕಾದಶಿʼ ಹಿಂದೂ ಧರ್ಮದಲ್ಲಿ ಏಕಾದಶಿಗೆ ಯಾಕಿಷ್ಟು ಮಹತ್ವವಿದೆ ಅಂತ ಬನ್ನಿ ನೋಡೋಣ. ಹೌದು ಏಕಾದಶಿ ಅಂದರೇ ಏನು? ಏಕಾದಶಿಯು ಸಂಸ್ಕೃತದ ಏಕಾದಶ ಎಂಬ ಪದದಿಂದ ಬಂದಿದೆ, (ಏಕ-ಒಂದು,ದಶ-ಹತ್ತು).ಒಟ್ಟಾರೇ ‘ಏಕಾದಶಿ’ ಎಂದರೆ ಹನ್ನೊಂದು ಎಂದು ಅರ್ಥ. ಪ್ರತಿ ತಿಂಗಳು ಕೃಷ್ಣ ಪಕ್ಷದಲ್ಲಿ ಒಂದು ಮತ್ತು ಶುಕ್ಲ ಪಕ್ಷದಲ್ಲಿ ಒಂದು – ಹೀಗೆ ವರ್ಷಕ್ಕೆ ಒಟ್ಟು 24 ಏಕಾದಶಿಗಳು ಬರುತ್ತವೆ. ಆದರೆ, ಈ ಎಲ್ಲಾ ಏಕಾದಶಿಗಳಲ್ಲಿ ಬಹಳ ವೀಶೇಷವಾದ್ದು ಧನುರ್ಮಾಸದಲ್ಲಿ ಬರುವ ‘ವೈಕುಂಠ ಏಕಾದಶಿ’ ಇದನ್ನು ‘ಮೋಕ್ಷದ ಏಕಾದಶಿ’ ಅಂತ ಕೂಡ ಕರಿತ್ತಾರೆ. ಪುರಾಣಗಳ ಪ್ರಕಾರ, ಈ ಪವಿತ್ರ ದಿನದಂದು ವೈಕುಂಠದ ಬಾಗಿಲುಗಳು ತೆರೆದಿರುತ್ತವೆ. ಅಂದು ಯಾರು ಭಕ್ತಿಯಿಂದ ಉಪವಾಸವಿದ್ದು, ಹರಿನಾಮ ಸ್ಮರಣೆ ಮಾಡುತ್ತಾರೋ ಅವರಿಗೆ ಭಗವಂತನ ನೇರ ದರ್ಶನಭಾಗ್ಯ ದೊರೆಯುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೇ, ಈ ದಿನದಂದು ಮರಣ ಹೊಂದಿದವರು ನೇರವಾಗಿ ಭಗವಂತನ ಪಾದ ಸೇರುತ್ತಾರೆ ಮತ್ತು ಅವರಿಗೆ ಮೋಕ್ಷ ಲಭಿಸುತ್ತದೆ  ಎಂದು ಹೇಳಲಾಗುತ್ತದೆ. ಈ ದಿನಕ್ಕೆ ‘ಏಕಾದಶಿ’ ಎಂಬ […] - [ಶಬರಿಮಲೆಗೆ ಹೋಗುವ ಮುನ್ನ ಈ ವಿಡಿಯೋ ನೋಡಿ | ಶನಿದೋಷ ನಿವಾರಣೆಗೆ ಕಪ್ಪು ಬಟ್ಟೆ! ಕಪ್ಪು ವಸ್ತ್ರದ ಹಿಂದೆ ಅಡಗಿದ ಶನಿ ದೇವರ ವಚನ ರಹಸ್ಯ!](https://kirunota.online/%e0%b2%b6%e0%b2%ac%e0%b2%b0%e0%b2%bf%e0%b2%ae%e0%b2%b2%e0%b3%86%e0%b2%97%e0%b3%86-%e0%b2%b9%e0%b3%8b%e0%b2%97%e0%b3%81%e0%b2%b5-%e0%b2%ae%e0%b3%81%e0%b2%a8%e0%b3%8d%e0%b2%a8-%e0%b2%88-%e0%b2%b5/): ನಮಸ್ಕಾರ, ಎಲ್ಲರಿಗೂ! ಪ್ರತಿವರ್ಷ ನವೆಂಬರ್‌ನಿಂದ ಜನವರಿವರೆಗೆ ಲಕ್ಷಾಂತರ ಭಕ್ತರು ಒಂದು ಕಠಿಣ ವ್ರತ ಕೈಗೊಂಡು, ‘ಸ್ವಾಮಿ ಶರಣಂ ಅಯ್ಯಪ್ಪ’ ಎಂದು ಕೂಗುತ್ತಾ ಶಬರಿಮಲೆಗೆ ಯಾತ್ರೆ ಮಾಡುತ್ತಾರೆ. ಆದರೆ, ಅಯ್ಯಪ್ಪ ಸ್ವಾಮಿಯ ಈ ಭಕ್ತರು ಮುಖ್ಯವಾಗಿ ಕಪ್ಪು ಅಥವಾ ಗಾಢ ನೀಲಿ ಬಟ್ಟೆಗಳನ್ನು ಯಾಕೆ ಧರಿಸುತ್ತಾರೆ? ಇದರ ಹಿಂದಿರುವ ಆಳವಾದ ಕಥೆ ಏನು? ಬನ್ನಿ, ಇಂದಿನ ವಿಡಿಯೋದಲ್ಲಿ ತಿಳಿಯೋಣ. ಶಬರಿಮಲೆ ಯಾತ್ರೆಯು 48 ದಿನಗಳ ‘ಮಂಡಲ ವ್ರತ’ದ ಕಠಿಣ ನಿಯಮಗಳ ಮೇಲೆ ನಿಂತಿದೆ. ಈ ವ್ರತದಲ್ಲಿ ಬ್ರಹ್ಮಚರ್ಯ, ಸಾತ್ವಿಕ ಆಹಾರ, ಮತ್ತು ಚಪ್ಪಲಿ ಬಿಡುವುದು ಮುಖ್ಯ. ಈ ಎಲ್ಲಾ ವ್ರತಗಳ ಜೊತೆಗೆ ಕಡ್ಡಾಯವಾಗಿ ಪಾಲಿಸಬೇಕಾದ ಇನ್ನೊಂದು ನಿಯಮವೇ ಕಪ್ಪು ವಸ್ತ್ರ ಧಾರಣೆ! ಮೊದಲಿಗೆ ಇದರ ಕಾರಣ ತಿಳಿಯೋಣ. ಇದರ ಹಿಂದಿರುವ ಮುಖ್ಯ ಕಾರಣವೇ ಶನೀಶ್ವರ ದೇವರ! ಹೌದು… ಪುರಾಣದ ಪ್ರಕಾರ, ಒಮ್ಮೆ ಅಯ್ಯಪ್ಪ ಸ್ವಾಮಿ ಮತ್ತು ಶನೀಶ್ವರ ದೇವರ ನಡುವೆ ಸಂವಾದ ನಡೆಯಿತು. ಶನಿ ದೇವನು ಮನುಷ್ಯರ ಕರ್ಮಗಳಿಗೆ ಅನುಗುಣವಾಗಿ ತೊಂದರೆಗಳನ್ನು ನೀಡುವುದು […] - [ಸೂರ್ಯನು ತುಲಾ ರಾಶಿಗೆ ಬರುವಾಗ ಏನಾಗುತ್ತದೆ? ತಿಳಿಯಲೇ ಬೇಕಾದ ಸತ್ಯ!”](https://kirunota.online/563-2/): ಸೂರ್ಯ ದೇವರು ಪ್ರತಿವರ್ಷ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕ್ಷಣವನ್ನು “ಸಂಕ್ರಮಣ” ಎನ್ನಲಾಗತ್ತೆ. ಸೂರ್ಯನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸುವ ಕ್ಷಣ ಅತ್ಯಂತ ಪವಿತ್ರ. ಅದೇ ತುಲಾ ಸಂಕ್ರಮಣ. ವೈಜ್ಞಾನಿಕವಾಗಿ  seintiyficaly ಹೇಳೋದಾದ್ರೆ,  ಭೂಮಿಯು ಸೂರ್ಯನ ಸುತ್ತ ಏಲಿಪ್ಟಿಕಲ್ (elliptical) ಮಾರ್ಗದಲ್ಲಿ ಸುತ್ತುತ್ತದೆ. ಆದರೆ ಭೂಮಿಯ ದೃಷ್ಟಿಯಿಂದ ನೋಡಿದಾಗ, ಸೂರ್ಯನು ಪ್ರತಿವರ್ಷ 12 ರಾಶಿಗಳ (360° ವೃತ್ತದ) ಮೂಲಕ ಚಲಿಸುವಂತೆ ಕಾಣುತ್ತದೆ. ಇದರಲ್ಲಿ ಸೂರ್ಯನು ಒಂದು ರಾಶಿಯಿಂದ (30° ವಿಭಾಗ) ಮತ್ತೊಂದು ರಾಶಿಗೆ ಪ್ರವೇಶಿಸುವ ಸಮಯ “ಸಂಕ್ರಮಣ” ಅಂದ್ರೆ — ಸೂರ್ಯನ ದೀಕ್ಷಿತ ರೇಖಾಂಶ (longitude) ಒಂದು ರಾಶಿಯಿಂದ ಇನ್ನೊಂದಕ್ಕೆ ಬದಲಾಗುವ ಕ್ಷಣ. ತುಲಾ  (Libra) ಅಂದರೆ “ತೂಕ” ಅಥವಾ “ಸಮತೋಲನ” ಎಂಬ ಅರ್ಥ. ಈ ಸಮಯದಲ್ಲಿ ಸೂರ್ಯನು ಭೂಮಿಯು ಸೂರ್ಯನ ಸುತ್ತ ಚಲಿಸುವ ಕಕ್ಷೆಯಲ್ಲಿ ಸಮಭಾಜಕ ರೇಖೆಯ (Equator) ಹತ್ತಿರ ಬರುತ್ತಾನೆ. ಆದ್ದರಿಂದ ದಿನ ಮತ್ತು ರಾತ್ರಿ ಸಮಾನ (almost equal) ಆಗಿರುತ್ತವೆ. ಭಾರತೀಯ ಕ್ಯಾಲೆಂಡರ್‌ನಲ್ಲಿ ಅದು […] - [ಮಾರ್ಗಶಿರ ಮಾಸದ ಗುರುವಾರದ ಲಕ್ಷ್ಮಿಯ ವ್ರತದ ಮಹತ್ವ.](https://kirunota.online/%e0%b2%ae%e0%b2%be%e0%b2%b0%e0%b3%8d%e0%b2%97%e0%b2%b6%e0%b2%bf%e0%b2%b0-%e0%b2%ae%e0%b2%be%e0%b2%b8%e0%b2%a6-%e0%b2%97%e0%b3%81%e0%b2%b0%e0%b3%81%e0%b2%b5%e0%b2%be%e0%b2%b0%e0%b2%a6-%e0%b2%b2/): ಮಾರ್ಗಶಿರ ಮಾಸವು ವಿಷ್ಣುವಿನ ಪ್ರಿಯ ಮಾಸ. ಗುರುವಾರ—ಬೃಹಸ್ಪತಿಯ ದಿನ—ಜ್ಞಾನ, ಧರ್ಮ, ಶ್ರೀಮಂತರಾಶಿಯ ಸಂಕೇತ. ಈ ಎರಡು ಸೇರಿದಾಗ — ಲಕ್ಷ್ಮಿ ಕೃಪೆ ಸಾವಿರಗುನ ಹೆಚ್ಚಾಗಿ ದೊರೆಯುತ್ತದೆ. ಅದ್ದರಿಂದ   ಮಾರ್ಗಶಿರ ಮಾಸ ಗುರುವಾರದ ಬೆಳಿಗ್ಗೆ ಲಕ್ಷ್ಮಿಯ ಕೃಪೆ ಎಲ್ಲ ಮನೆಗಳಿಗೂ ಸುಲಭವಾಗಿ ಬರುವ ದಿನ ಅಂತ ಹೇಳ್ತಾರೆ. ಈ ದಿನ ಮನೆಯ ಬಾಗಿಲಿಗೆ ಹಳದಿ ಬಣ್ಣದಿಂದ ರಂಗೋಲಿ   ಹಾಕಿ , ತಾಯಿ ಲಕ್ಷ್ಮಿಯ ಪಾದಗಳನ್ನು ಕುಂಕುಮದ ನೀರಿನಿಂದ ಬಿಡಿಸಿ ಪೂಜಿಸಲಾಗುತ್ತದೆ. ಇದರ್ಥ ಲಕ್ಷ್ಮಿ ದೇವಿ ನಮ್ಮ ಮನೆಗಳಿಗೆ ಪ್ರವೇಶಿಸುವುದಾಗಿದೆ. ಲಕ್ಷ್ಮಿ ದೇವಿಗೆ ಹಳದಿ ಹೂವು, ಅರಿಶಿನ-ಕುಂಕುಮ, ಅಕ್ಷತೆ ಜೊತೆಗೆ ಪಾಯಸ ಅಥಾವ ಬೇಳೆ-ಅಕ್ಕಿ (ಕಿಚಡಿ) ನೈವೇದ್ಯ ಅರ್ಪಿಸಿ. ಸಂಜೆ ಸಮಯಕ್ಕೆ “ಈ ದಿನ ಹಚ್ಚುವ ಒಂದು ದೀಪ… ಕೇವಲ ಬೆಳಕು ಅಲ್ಲ… ಮನೆಯಲ್ಲಿ ಶಾಂತಿ, ಆರೋಗ್ಯ, ಐಶ್ವರ್ಯದ ಸಂಕೇತ.” ವಾಗಿದ್ದು ,  ಲಕ್ಷ್ಮೀ ಅಷ್ಟೋತ್ತರ ಪಠಣ ಮಾಡುವುದು ಹೆಚ್ಚು ಫಲ ತರುತ್ತದೆ. ಇದರ ಬಗ್ಗೆ “ಪುರಾಣದಲ್ಲಿ ಒಂದು ಸುಂದರ ಕಥೆ”ಯೇ ಇದೆ. ಒಮ್ಮೆ, […] - ["ಹನುಮದ್ ಜಯಂತಿ" ರಘುನಾಥನ ಭಕ್ತಯಾದ ಹನುಮಂತನ ಜನ್ಮ ಉತ್ಸವ.](https://kirunota.online/%e0%b2%b9%e0%b2%a8%e0%b3%81%e0%b2%ae%e0%b2%a6%e0%b3%8d-%e0%b2%9c%e0%b2%af%e0%b2%82%e0%b2%a4%e0%b2%bf-%e0%b2%b0%e0%b2%98%e0%b3%81%e0%b2%a8%e0%b2%be%e0%b2%a5%e0%b2%a8-%e0%b2%ad%e0%b2%95%e0%b3%8d/): ಭಗವಾನ್ ಹನುಮಂತನು ಅಂಜನಾದೇವಿ ಮತ್ತು ಕೇಸರಿ ಅವರ ಪುತ್ರ. ಇವನನ್ನು ವಾಯುಪುತ್ರ ಮತ್ತು ಶಿವನ ೧೧ನೇ ರುದ್ರನ ಅವತಾರ “ರೂದ್ರಾಂಶ ಸಮ್ಭವ” ಎಂದೂ ಕರೆಯಲಾಗುತ್ತದೆ.  ಹನುಮದ್ ಜಯಂತಿಯನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಪ್ರಾದೇಶಿಕ ಸಂಪ್ರದಾಯಗಳು ಮತ್ತು ಹನುಮಂತನ ಜೀವನದ ಎರಡು ಮಹತ್ವದ ಘಟನೆಗಳನ್ನು ಸ್ಮರಿಸುವುದು. ಭಾರತದ ವಿವಿಧ ಭಾಗಗಳಲ್ಲಿ ಮತ್ತು ಪಾರಂಪರಿಕ ಪಂಚಾಂಗಗಳಲ್ಲಿ ಹನುಮಂತನ ಜನ್ಮದಿನವನ್ನು ಲೆಕ್ಕ ಹಾಕುವ ರೀತಿ ಬೇರೆಬೇರೆ. ಸಾಮಾನ್ಯವಾಗಿ ಚೈತ್ರ ಮಾಸದ ಪೂರ್ಣಿಮೆಯನ್ನು ಹನುಮಂತನ ಜನ್ಮ ದಿನವೆಂದು ಪರಿಗಣಿಸುತ್ತಾರೆ. ಇದು ಅವನ ಜನ್ಮ ಉತ್ಸವ. ಈ ದಿನ → ರಘುನಾಥನ ಭಕ್ತಯಾದ ಹನುಮಂತನ ಜನ್ಮವನ್ನು ನೆನೆದು ಆಚರಿಸುವದು ಸಂಪ್ರದಾಯ. ವಾಲ್ಮೀಕಿ ರಾಮಾಯಣದ ಪ್ರಕಾರ, ಹನುಮಂತನ ತಾಯಿ ಅಂಜನಾದೇವಿ (ವಾನರಿಯಾಗಿ ಜನ್ಮ ಪಡೆದ ಒಬ್ಬ ಶಾಪಗ್ರಸ್ತ ಅಪ್ಸರೆ) ಮತ್ತು ತಂದೆ ಕೇಸರಿ (ಸುಮೇರು ಪ್ರದೇಶದ ರಾಜ). ಅಂಜನಾದೇವಿಯು ಮಕ್ಕಳಿಲ್ಲದಿದ್ದಾಗ ಶಾಪ ವಿಮೋಚನೆಗಾಗಿ ಶಿವನ ಭಕ್ತಿಯಾಗಿ ಕಠಿಣ ತಪಸ್ಸು ಮಾಡಿದಳು. ಅಂಜನಾ ತಪಸ್ಸಿನಿಂದ ಸಂತೋಷಗೊಂಡ […] - [ರಾಯರ ಪಂಚಾವತಾರ ರಹಸ್ಯ! | Shankukarna to Raghavendra – The Untold Divine Journey 🙏](https://kirunota.online/%e0%b2%b0%e0%b2%be%e0%b2%af%e0%b2%b0-%e0%b2%aa%e0%b2%82%e0%b2%9a%e0%b2%be%e0%b2%b5%e0%b2%a4%e0%b2%be%e0%b2%b0-%e0%b2%b0%e0%b2%b9%e0%b2%b8%e0%b3%8d%e0%b2%af-shankukarna-to-raghavendra-the/): ನಮಸ್ಕಾರ! ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಲ್ಪವೃಕ್ಷ ಮತ್ತು ಕಾಮಧೇನು. ಇಂದಿಗೂ ಮಂತ್ರಾಲಯದಲ್ಲಿ ಸಜೀವ ಬೃಂದಾವನದ ಮೂಲಕ ಭಕ್ತರನ್ನು ಕಾಯುತ್ತಿರುವ ರಾಯರ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ, ಈ ಮಹಾ ಯತಿ ತಮ್ಮ ಸನ್ಯಾಸಕ್ಕಿಂತ ಮೊದಲು ನಾಲ್ಕು ರೂಪಗಳಲ್ಲಿ ಅವತರಿಸಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಬನ್ನಿ, ನೋಡೋಣ ರಾಯರ ಪಂಚಾವತಾರಗಳು ಯಾವು ಮತ್ತು ಅವುಗಳ ಮಹತ್ವ ಏನು ಎಂದು. ಇವರು ಬ್ರಹ್ಮದೇವರ ಸಭೆಯಲ್ಲಿ ದೇವತಾ ಪೂಜೆಗೆ ಪುಷ್ಪಗಳನ್ನು ತರುವ ಕರ್ಮಜ ದೇವತೆ. ದೇವತಾ ಪೂಜೆಗೆ ಹೂವುಗಳನ್ನು ತರುವಲ್ಲಿ ತಡವಾದ ಕಾರಣ, ಬ್ರಹ್ಮದೇವರು ಭೂಮಿಯಲ್ಲಿ ಜನ್ಮ ತಾಳಿ ಭಗವಂತನ ಸೇವೆ ಮಾಡು! ಎಂದು ಶಾಪ ನೀಡಿದರು. ಈ ಶಾಪವೇ ರಾಯರ ದಿವ್ಯ ಪಯಣದ ಆರಂಭ. ಅಸುರ ರಾಜ ಹಿರಣ್ಯಕಶಿಪುವಿನ ಮಗನಾಗಿ, ವಿಷ್ಣುವಿನ ಪರಮ ಭಕ್ತನಾಗಿ. ಈ ರೂಪದಲ್ಲಿ ಅವರು ಸತ್ಯ, ನಂಬಿಕೆ ಮತ್ತು ನಿಜವಾದ ಭಕ್ತಿಯ ಶ್ರೇಷ್ಠತೆಯನ್ನು ಜಗತ್ತಿಗೆ ತೋರಿಸಿದರು ಮತ್ತು ನರಸಿಂಹ ದೇವರ ಅನುಗ್ರಹಕ್ಕೆ ಪಾತ್ರರಾದರು. ಮಹಾಭಾರತ ಕಾಲದಲ್ಲಿ ಕೌರವರ ಪರವಾಗಿದ್ದರೂ, […] - [ಕಾರ್ತಿಕದ 'ದೇವೋತ್ಥಾನ'  ಏಕಾದಶಿ, ಭಗವಂತ ವಿಷ್ಣು ಯೋಗನಿದ್ರೆಯಿಂದ ಎಚ್ಚರವಾದ ದಿನ](https://kirunota.online/%e0%b2%95%e0%b2%be%e0%b2%b0%e0%b3%8d%e0%b2%a4%e0%b2%bf%e0%b2%95%e0%b2%a6-%e0%b2%a6%e0%b3%87%e0%b2%b5%e0%b3%8b%e0%b2%a4%e0%b3%8d%e0%b2%a5%e0%b2%be%e0%b2%a8-%e0%b2%8f%e0%b2%95%e0%b2%be/): ಭಗವಂತನಿಗೂ ಕೂಡ ವಿಶ್ರಾಂತಿಯ ಅವಶ್ಯಕತೆ ಬಂತ, ಅದಕ್ಕಗಿಯೇ ಅವಧಿಯನ್ನೂ ಕೂಡ ನಿಗದಿ ಮಾಡಿದ್ರ, ಯಾಕೀರಲ್ಲಾ ಹೇಳಿ ಕಂಡಿತ ಇದೆ, ದೇವಶಯನಿ ಏಕಾದಶಿ ಇದು ಭಗವಂತನಾದ ವಿಷ್ಣುವು ಯೋಗನಿದ್ರೆಗೆ ಜಾರುವ ಸಮಯ ಅಂತಾನೇ ಹೇಳಲಗತ್ತೆ,  ಆಷಾಢ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನ. ಇದನ್ನು ಆಷಾಢ ಏಕಾದಶಿ, ಪ್ರಥಮ ಏಕಾದಶಿ ಅಥವಾ ಹರಿಶಯನಿ ಏಕಾದಶಿ ಎಂದೂ ಕೂಡ ಕರೆಯಾಲಾಗತ್ತೇ. ದೇವಶಯನಿ ದೇವರು ಶಯನಿಸುವುದು ಅಂದರೇ ದೇವರು ನಿದ್ರಿಸುವುದು ಎಂದರ್ಥ. ದೇವಶಯನಿ ಏಕಾದಶಿಯಂದು ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ಯೋಗನಿದ್ರೆಗೆ ಜಾರಿದ ಮಹಾವಿಷ್ಣುವು, ಸರಿಯಾಗಿ ನಾಲ್ಕು ತಿಂಗಳ ನಂತರ (ಕಾರ್ತಿಕದ ‘ದೇವೋತ್ಥಾನ’  ಏಕಾದಶಿಯಂದು) ಎಚ್ಚರಗೊಳ್ಳುತ್ತಾನೆ ಎಂಬುದು ಪುರಾಣಗಳ ನಂಬಿಕೆ. ‘ದೇವೋತ್ಥಾನ’ ಎಂದರೆ ‘ದೇವನನ್ನು ಎಬ್ಬಿಸುವುದು’ ಎಂದರ್ಥ. ಎಚ್ಚರಗೊಂಡ ಭಗವಂತ ಶ್ರೀ ವಿಷ್ಣುವು ಸೃಷ್ಠಿಕರ್ತನಾಗಿ ಮತ್ತೇ ಸೃಷ್ಠಿಯ ಜವಬ್ದಾರಿಯನ್ನು ನಿಭಾಯಿಸಲು ಆರಂಭಿಸಿದ ದಿನ ಕೂಡ ಹೌದು. ಈ ಬಾರಿಯ ‘ದೇವೋತ್ಥಾನ’ಏಕಾದಶಿಯು ಇದೇ ಕಾರ್ತಿಕ ಮಾಸ ನವೆಂಬರ್‌ 1 ಶನಿವಾರ ಬಂದಿರುವುದು ತುಂಬ ವಿಶೇಷ.  ವಿಷ್ಣುವು ಯೋಗನಿದ್ರೆಗೆ ಜಾರುವುದರ ಹಿಂದೆ […] - [ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿರುವ ಗಂಗಾ ನದಿ](https://kirunota.online/%e0%b2%ad%e0%b2%be%e0%b2%b0%e0%b2%a4%e0%b2%a6-%e0%b2%aa%e0%b3%81%e0%b2%b0%e0%b2%be%e0%b2%a3-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%ae%e0%b2%b9%e0%b2%be%e0%b2%95%e0%b2%be%e0%b2%b5/): ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ “ದೇವನದಿ” ಎಂದು ವರ್ಣಿಸಲ್ಪಟ್ಟಿರುವ ಗಂಗಾ ನದಿಯು ಗಂಗೋತ್ರಿ ಹಿಮಾಲಯ ಪರ್ವತಗಳ ನಡುವಿನ ಗೌಮುಖ ಎಂಬ ಗುಹೆ ಉಗಮಿಸಿ ಭಾಗೀರಥಿಯಾಗಿ ಹೊರಹೊಮ್ಮುವುದ ಜೊತೆಗೆ ದೇವಪ್ರಯಾಗದಲ್ಲಿ ಅಲಕನಂದಾ ನದಿಯನ್ನು ಸೇರಿ ಗಂಗೆಯಾಗಿ   ಹರಿಯುತ್ತಾ ಬಂಗಾಳಕೊಲ್ಲಿಯನ್ನು ಸೇರುವ ಈ ನದಿಯು ಪಾಪಗಳನ್ನು ತೊಳೆದು,ಆತ್ಮಗಳಿಗೆ ಮೋಕ್ಷವನ್ನು ನೀಡುವುದು ಎನ್ನಲಾಗುತ್ತೆ. ಇಂತಹ ಪುಣ್ಯ ನದಿ ಹೇಗೆ ಭೂಮಿಗೆ ಬಂತು,  ಇದರ  ಹಿಂದೆ ಇದೆ ಒಂದು ದೊಡ್ಡ ದಂತಕಥೆ. ಒಮ್ಮೆ, ಸತ್ಯಯುಗದಲ್ಲಿ ಇಕ್ಷ್ವಾಕು ವಂಶದ ರಾಜ ಸಗರನು ಅಶ್ವಮೇಧ ಯಜ್ಞವನ್ನು ನಡೆಸುತ್ತಿದ್ದ. ಅದು ಇಂದ್ರನ ಸಿಂಹಾಸನವನ್ನು ಕೂಡ ಅಲ್ಲಾಡಿಸುವಷ್ಟು ಶಕ್ತಿಶಾಲಿ ಯಜ್ಞವದ್ದರಿಂದ  ಇಂದ್ರನು ಯಜ್ಞದ ಕುದುರೆಯನ್ನು ಕದ್ದೊಯ್ದು ಕಪಿಲ ಮುನಿಯ ಆಶ್ರಮದಲ್ಲಿ ಅಡಗಿಸಿಟ್ಟನು. ಇದನ್ನರಿಯಾದ ಸಗರನು ಕುದುರೆಯನ್ನು ಹುಡುಕಿ ತರಲು ತನ್ನ 60,000 ಪುತ್ರರನ್ನು ಕಳಿಸಲು. ಅವರು ಕುದುರೆಯನ್ನು ಪಾತಾಳದಲ್ಲಿ ಕಪಿಲ ಮುನಿಯ ಆಶ್ರಮದ ಬಳಿ ಕಂಡರು. ಕಪಿಲ ಮುನಿಯೇ ಕುದುರೆಯನ್ನು ಕದ್ದಿದ್ದಾನೆಂದು ಭಾವಿಸಿ ಅವರನ್ನು ಅವಮಾನಿಸಲು. ತಮ್ಮ ತಪಸ್ಸಿಗೆ ಭಂಗ ಬಂದಿದ್ದರಿಂದ […] - [ಗಂಗಾ, ಲಕ್ಷ್ಮಿ, ಸರಸ್ವತಿ — ದೇವಿಯರ ಶಾಪದಿಂದ ಆಶೀರ್ವಾದದ ಕಥೆ!"](https://kirunota.online/%e0%b2%97%e0%b2%82%e0%b2%97%e0%b2%be-%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae%e0%b2%bf-%e0%b2%b8%e0%b2%b0%e0%b2%b8%e0%b3%8d%e0%b2%b5%e0%b2%a4%e0%b2%bf-%e0%b2%a6%e0%b3%87/): ಜ್ಞಾನ, ಸಂಪತ್ತು ಮತ್ತು ಶುದ್ಧತೆಯ ಪ್ರತೀಕರಾಗಿದ್ದ  ಲಕ್ಷ್ಮೀ, ಸರಸ್ವತಿ, ಹಾಗೂ ಗಂಗೆ ಭಗವಾನ್ ಶ್ರೀ ವಿಷ್ಣುವಿನ ಶಾಶ್ವತ ಸಹಚರಿಣಿಯರು. ಒಮ್ಮೆ ಭಗವಂತನಾದ ವಿಷ್ಣುವು ಗಂಗೆಯನ್ನೇ ಜಾಸ್ತಿ ಪ್ರೀತಿಸುತ್ತಾನೆ ಅಂತ ಅನುಮಾನಿಸಿದ  ಸರಸ್ವತಿಗೆ ಇರ್ಷೆ ಉಂಟಾಗಿ ಗಂಗೆಯೊಡನೆ ತುಂಬ ಕಟೋರವಾಗಿ ನಡೆದುಕೊಳ್ಳುತ್ತಾಳೆ. ಶಾಂತಿ ಮತ್ತು ಸಹಾನುಭೂತಿಯ ಪ್ರತಿರೂಪವಾದ ಲಕ್ಷ್ಮಿ ಮಧ್ಯ ಪ್ರವೇಶಿಸಿ  ಇಬ್ಬರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದಗ. ಲಕ್ಷ್ಮೀ ಗಂಗೆಯ ಪಕ್ಷವನ್ನೇ ವಹಿಸುತ್ತಿದ್ದಾಳೆ ಎಂದು ಅಪಾರ್ಥ ಮಾಡಿಕೊಳ್ಳುವ ಸರಸ್ವತಿ  ಲಕ್ಷ್ಮೀ ನೀನು ಭೂಮಿಯಲ್ಲಿ ಜನ್ಮ ತಾಳಿ, ಒಂದು  ನದಿಯಾಗಿ ಮತ್ತು ಗಿಡವಾಗಿ ಕಾಣಿಸು ಅಂತ ಶಪಿಸಿ ಬಿಡ್ತಾಳೆ. ಇದನ್ನು ನೋಡಿದ ಗಂಗೆ ಕೋಪಗೊಂಡು ನನ್ನ ಸಹೋದರಿಯನ್ನ ಶಾಪಿದ ನೀನು ಕೂಡ ಒಂದು ನದಿಯಾಗಿ ಪಾಪಿಗಳು ವಾಸಿಸುವ ಭೂಲೋಕಕ್ಕೆ ತೆರಳು ಎಂದು ಶಾಪ ನೀಡ್ತಾಳೆ . ಮತ್ತೇ ತಕ್ಷಣವೇ ಸರಸ್ವತಿ ನೀನು ಸಹ ಭೂಲೋಕಕ್ಕೆ ನದಿಯಾಗಿ ಹೋಗಿ ಅಲ್ಲಿ ಎಲ್ಲಾರ ಪಾಪಗಳನ್ನು ಹೊರಬೇಕು ಅಂತ ಗಂಗೆಯನ್ನ ಶಾಪಿಸಿ ಬಿಡ್ತಾಳೆ. ಹೀಗೆ  ಅನಗತ್ಯವಾದ ಕ್ಷುಲ್ಲಕ ಜಗಳವೂ ಶಾಪದಿಂದ […] - [ಅಮಾವಾಸ್ಯೆ-ಹುಣ್ಣಿಮೆ ಹುಟ್ಟಿದ್ದು ಹೇಗೆ ? ಕಾರ್ತಿಕ ಸೋಮವಾರದ ರಹಸ್ಯ! | ಶಿವನು ಚಂದ್ರನನ್ನು ತಲೆಯ ಮೇಲೆ ಧರಿಸಲು ಕಾರಣವೇನು?](https://kirunota.online/%e0%b2%85%e0%b2%ae%e0%b2%be%e0%b2%b5%e0%b2%be%e0%b2%b8%e0%b3%8d%e0%b2%af%e0%b3%86-%e0%b2%b9%e0%b3%81%e0%b2%a3%e0%b3%8d%e0%b2%a3%e0%b2%bf%e0%b2%ae%e0%b3%86-%e0%b2%b9%e0%b3%81%e0%b2%9f%e0%b3%8d%e0%b2%9f/): ಅಮಾವಾಸ್ಯೆ, ಹುಣ್ಣಿಮೆ ಅಂದರೇನು ಇದಕ್ಕೂ ಕಾರ್ತಿಕ ಸೋಮವಾರಕ್ಕೂ ಏನ್ ಸಂಬಂಧ .ಕಾರ್ತಿಕ ಸೋಮವಾರ ಯಾಕಿಷ್ಟು ವಿಶೇಷ. ಕಾರ್ತಿಕ ಮಾಸ ಅಂದರೇನೆ ಹಾಗೆ ತುಂಬ ವಿಶೇಷ ಅಂತಾನೇ ಹೇಳಬಹುದು, ಸಾಮಾನ್ಯವಾಗಿ ಸೋಮವಾರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಅದರಲ್ಲೂ, ಕಾರ್ತಿಕ ಮಾಸದ ಸೋಮವಾರದಂದು ಶಿವನನ್ನು ಪೂಜಿಸುವುದರಿಂದ ಕೋಟಿ ಸೋಮವಾರಗಳ ಪೂಜಾ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಕಾರ್ತಿಕ ಮಾಸದ ಸೋಮವಾರದಂದು ಎಲ್ಲಾ ದೇವಾಲಯಗಳು ಲಕ್ಷ ದೀಪಗಳಿಂದ ಕಂಗೊಳಿಸುತ್ತವೆ. ದೀಪಾವಳಿಯಿಂದ ಶುರುವಾದ ದೀಪಾಗಳ ಹಚ್ಚುವ ಆಚರಣೆ ಕಡೆ ಕಾರ್ತಿಕ ಸೋಮವಾರದ ದಿನದಂದು ತುಂಬ ಪುಣ್ಯ ಕ್ಷೇತ್ರಗಳು ಮತ್ತು ಎಲ್ಲಾ ಶಿವ ದೇವಾಲಯಗಳಲ್ಲಿ ಲಕ್ಷಾಂತರ ದೀಪ ಹಚ್ಚಿ ಪೂಜಿಸಲಾಗುತ್ತದೆ. ದೀಪಾರಾಧನೆಯು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ, ಜ್ಞಾನ ಮತ್ತು ಸತ್ಯದ ಬೆಳಕನ್ನು ತರುತ್ತದೆ. “ಸೋಮ” ಎಂದರೆ ಚಂದ್ರ. ಸೋಮದೇವತೆ (ಚಂದ್ರ) ಶಿವನ ತಲೆಯ ಮೇಲೆ ಅಲಂಕಾರವಾಗಿ ಇರಲು ಕಾರಣ, ಈ ದಿನವನ್ನು ಶಿವನಿಗೆ ಅತ್ಯಂತ ಪ್ರಿಯದಿನ ಎಂದು ಪರಿಗಣಿಸಲಾಗಿದೆ. ಶಿವಪುರಾಣದಲ್ಲಿ ಹೇಳಿದಂತೆ, ಚಂದ್ರ ದೇವನು ದಕ್ಷ ಪ್ರಜಾಪತಿಯ 27 […] - [ಭಕ್ತನ ಶುದ್ಧ ಹೃದಯಕ್ಕೆ ದೇವರೇ ತಿರುಗಿದ! ಕನಕದಾಸರ ಅದ್ಭುತ ಪವಾಡದ ಕಥೆ](https://kirunota.online/%e0%b2%ad%e0%b2%95%e0%b3%8d%e0%b2%a4%e0%b2%a8-%e0%b2%b6%e0%b3%81%e0%b2%a6%e0%b3%8d%e0%b2%a7-%e0%b2%b9%e0%b3%83%e0%b2%a6%e0%b2%af%e0%b2%95%e0%b3%8d%e0%b2%95%e0%b3%86-%e0%b2%a6%e0%b3%87%e0%b2%b5/): ಕನಕದಾಸರು ಸಾಕ್ಷಾತ್ ಭಗವಂತನೇ ಅವರೆಡೆಗೆ ತಿರುಗಿ ದರ್ಶನ ನೀಡುವಂತೆ ಮಾಡಿದ ಮಹಾನ್ ಹರಿ ಭಕ್ತರು. ಕನಕದಾಸರ ಮೂಲ ಹೆಸರು  ತಿಮ್ಮಪ್ಪ ನಾಯ್ಕ. ಕ್ರಿಸ್ತ ಶಕ 1509ರಲ್ಲಿ, ಹವೇರಿ ಜಿಲ್ಲೆಯ ಬೀರೆಗೌಡ, ಬೀಚಮ್ಮನವರ ಮಗನಾಗಿ  ಬಡ ಕುರುಬ ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಲ್ಲಿ ಧೈರ್ಯಶಾಲಿ ಯೋಧನಾಗಿದ್ದರು, ಮತ್ತು ರಾಜ್ಯದ ಸೇನೆಯಲ್ಲಿ ಸೇವೆ ಮಾಡುತ್ತಿದ್ದು, ತಮ್ಮ ಪ್ರದೇಶದ (ಸೈನಿಕ ಮುಖ್ಯಸ್ಥ) ದಂಡನಾಯಕರಾಗಿದ್ದರು. ಒಮ್ಮೆ, ಯುದ್ಧದಲ್ಲಿ ತೀವ್ರ ಗಾಯಗೊಂಡಾಗ, ಜೀವನದ ಅರ್ಥವನ್ನು ಅರಿತು, ಅವರ ಮನಸ್ಸು ಭಗವಂತನ ಕಡೆ ತಿರುಗಿತು. ಅಂದಿನಿಂದಲೇ ಅವರು ಲೋಕತ್ಯಾಗ ಮಾಡಿ, ಭಕ್ತಿ ಮಾರ್ಗಕ್ಕೆ ಕಾಲಿಟ್ಟರು.  ಇವರಿಗೆ ಕನಕದಾಸ ಎಂಬ ಹೆಸರು ಹೇಗೆ ಬಂತು?. ಕನಕದಾರರೆಂಬ ಹೆಸರು ಬಂದಿದ್ದು ಕೂಡ ಒಂದು ಅದ್ಬುತ ಅಂತಾನೆ ಹೇಳಬಹುದು. ಅವರಿಗೆ ಅಕಸ್ಮಾತ್ತಾಗಿ ಸಿಕ್ಕ ರತ್ನಾಕನಕಗಳ ಚಿನ್ನದ ನಿಧಿಯಿಂದ (ಕನಕದಿಂದ) ವೈರಾಗ್ಯ ಹೊಂದಿ, ಆ ಸಂಪತ್ತನ್ನು ದಾನ ಮಾಡಿ ಹರಿದಾಸರಾಗಲು ನಿರ್ಧರಿಸಿದರು. ಇದರ ನಂತರವೇ ಅವರು ರತ್ನ, ಕನಕವನ್ನು ದಾನ ಮಾಡಿದ ಕಾರಣ ಕನಕ ಎಂದು […] - [ಗಣೇಶ ಚತುರ್ಥಿಗೂ ಸಂಕಷ್ಟಹರ ಚತುರ್ಥಿಗೂ ಇರುವ ನಂಟು](https://kirunota.online/%e0%b2%97%e0%b2%a3%e0%b3%87%e0%b2%b6-%e0%b2%9a%e0%b2%a4%e0%b3%81%e0%b2%b0%e0%b3%8d%e0%b2%a5%e0%b2%bf%e0%b2%97%e0%b3%82-%e0%b2%b8%e0%b2%82%e0%b2%95%e0%b2%b7%e0%b3%8d%e0%b2%9f%e0%b2%b9%e0%b2%b0/): ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎಂಬ ಜನಪ್ರಿಯ ನಂಬಿಕೆಯು ಪ್ರಸಿದ್ಧ ಪೌರಾಣಿಕ ಕಥೆಯಲ್ಲಿ ಬೇರೂರಿದೆ, ಇದು ನಮ್ರತೆ ಮತ್ತು ಹೆಮ್ಮೆಯ ಅಪಾಯಗಳ ಬಗ್ಗೆ ಪ್ರಬಲ ಪಾಠವನ್ನು ಕಲಿಸುತ್ತದೆ. ಗಣೇಶ ಮತ್ತು ಚಂದ್ರನ ದಂತಕಥೆ ಗಣೇಶನಿಗೆ ಆನೆ ಮೊಗ ಹೇಗೆ ಬಂತು ಎಂಬುದರ ಕಥೆ ನಮಗೆಲ್ಲ ತಿಳಿದೆಯಿದೆ. ಪಾರ್ವತಿದೇವಿಯಿಂದ ಸೃಷ್ಠಿಸಲ್ಪಟ್ಟ ಗಣೇಶನು, ಶಿವನ ಕೋಪಕ್ಕೆ ತುತ್ತಾಗಿ, ಶಿವನ ತ್ರಿಶೂಲದಿಂದ ಶಿರಚ್ಛೇದನಕ್ಕೆ ಒಳಗಾದನು, ನಂತರ ಪಾರ್ವತಿದೇವಿಯ ಮಮತೆಯ ಕೂಗು ಶಿವನಿಗೆ ಮುಟ್ಟಿತು,ಪಾರ್ವತಿದೇವಿಯ ಮಮತೆಯ ಕೂಗಿಗೆ ಕರಗಿದ ಶಿವನು ಗಣೇಶನಿಗೆ ಅವನ ಶಿರದ ಬದಲಾಗಿ ಆನೆ ಮೊಗವನ್ನು ತೊಡಿಸಿದರ ಜೊತೆಗೆ ಆದಿ ಪೂಜಿತನಾಗುವಂತೆ ವರ ನೀಡಿದರು. ಈ ರೀತಿಯಾಗಿ ಆದಿವಂದಿತನಾದ ವಿನಾಯಕನು ಒಂದು ದಿನ,ಭೂಲೋಕದ  ಒಂದು ಭವ್ಯ ಹಬ್ಬವಾದ ಗಣೇಶ ಚತುರ್ಥಿಯ ದಿನದಂದು ಭೂಲೋಕಕ್ಕೆ ಬಂದು ಭಕ್ತರಿಂದ ಪೂಜೆ, ನೈವೇದ್ಯಗಳನ್ನು ಸ್ವೀಕರಿಸಿದ ನಂತರ, ಗಣೇಶನು ತನ್ನ ವಾಹನವಾದ ಮೂಷಿಕನ ಮೇಲೆ ಕುಳಿತು ತಡರಾತ್ರಿ ಮನೆಗೆ ಸವಾರಿ ಮಾಡುತ್ತಿದ್ದನು. ಗಣೇಶನು ತನ್ನ ನೆಚ್ಚಿನ ಸಿಹಿತಿಂಡಿಗಳಾದ ಮೋದಕಗಳನ್ನು ತುಂಬಾ ತಿಂದು, […] - [ಕರ್ನಾಟಕದ ಐತಿಹಾಸಿಕ ಸ್ಥಳಗಳು ಮತ್ತು ಅವುಗಳ ಇತಿಹಾಸ, ಹಿನ್ನೆಲೆ.](https://kirunota.online/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6-%e0%b2%90%e0%b2%a4%e0%b2%bf%e0%b2%b9%e0%b2%be%e0%b2%b8%e0%b2%bf%e0%b2%95-%e0%b2%b8%e0%b3%8d%e0%b2%a5%e0%b2%b3%e0%b2%97%e0%b2%b3/): ಹಂಪಿ: 14 ರಿಂದ 16 ನೇ ಶತಮಾನದವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ, ಇದು ವ್ಯಾಪಾರ, ಕಲೆ, ಮತ್ತು ಧರ್ಮದ ಪ್ರಮುಖ ಕೇಂದ್ರವಾಗಿತ್ತು. ಅದರಲ್ಲೂ, ಸಾಮ್ರಾಟ ಶ್ರೀ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಹಂಪಿಯು ವೈಭವದ ಉತ್ತುಂಗಕ್ಕೇರಿತ್ತು. ಬೇರೆ ಯಾವುದೇ ನಗರಕ್ಕೆ ಹೋಲಿಸಲಾಗದ ನಗರವಾಗಿದ್ದ ಹಂಪಿ ತುಂಗಭದ್ರಾ ನದಿಯ ದಡದಲ್ಲಿರುವ ಇದರ ಅವಶೇಷಗಳು ಸಾಮ್ರಾಜ್ಯದ ಶಕ್ತಿ ಮತ್ತು ಕಲಾತ್ಮಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಭವ್ಯವಾದ ವಿರೂಪಾಕ್ಷ ದೇವಾಲಯ ಮತ್ತು ವಿಠ್ಠಲ ದೇವಾಲಯವು ವಿಜಯನಗರ ವಾಸ್ತುಶಿಲ್ಪದ ಉಸಿರುಕಟ್ಟುವ ಉದಾಹರಣೆಗಳಾಗಿದ್ದು, ಇಲ್ಲಿನ ಕಲ್ಲಿನ ರಥ ಮತ್ತು ಸಂಗೀತ ಹೊರಸೂಸುವ ಕಂಬಗಳು (Musical Pillars) ವಿಶ್ವವಿಖ್ಯಾತವಾಗಿವೆ. ಪೌರಾಣಿಕ ಕಥೆಗಳ ಕಥೆಗಳನ್ನು ಹೇಳುವ ಸಂಕೀರ್ಣವಾದ ಕೆತ್ತನೆಗಳು ಮತ್ತು ಶಿಲ್ಪಗಳನ್ನು ಹೊಂದಿದೆ. 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಭಾರತದ ಅತ್ಯಂತ ಪ್ರಸಿದ್ಧ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ಆದರೆ, 1565ರಲ್ಲಿ ನಡೆದ ತಾಳಿಕೋಟೆ ಯುದ್ಧದ ನಂತರ ಡೆಕ್ಕನ್ ಸುಲ್ತಾನರು ಈ ನಗರವನ್ನು ನಾಶಪಡಿಸಿದರು, […] - [ಕರ್ನಾಟಕದ ಒಂಬತ್ತು ಪ್ರಸಿದ್ಧ ದೇವಿ (ನವಶಕ್ತಿ) ದೇವಾಲಯಗಳು ಮತ್ತು ವಿಶೇಷತೆಗಳು](https://kirunota.online/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6-%e0%b2%92%e0%b2%82%e0%b2%ac%e0%b2%a4%e0%b3%8d%e0%b2%a4%e0%b3%81-%e0%b2%aa%e0%b3%8d%e0%b2%b0%e0%b2%b8%e0%b2%bf%e0%b2%a6%e0%b3%8d/): ಕರ್ನಾಟಕದಲ್ಲಿ 9 ದೇವಿ (ನವಶಕ್ತಿ) ದೇವಾಲಯಗಳು ಇಲ್ಲಿವೆ, ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಭಕ್ತಿಗೆ ಹೆಸರುವಾಸಿಯಾಗಿದೆ. ಚಾಮುಂಡೇಶ್ವರಿ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯ, ಶೃಂಗೇರಿ ಶಾರದಾಂಬ ದೇವಾಲಯ, ಶ್ರೀ ಅನ್ನಪೂರ್ಣೇಶ್ವರೀ ದೇವಾಲಯ, ಬಾದಾಮಿ ಬನಶಂಕರಿ ದೇವಾಲಯ, ಭದ್ರಕಾಳಿ ದೇವಾಲಯ, ಕಟೀಲು ದುರ್ಗಾ ಪರಮೇಶ್ವರಿ ದೇವಾಲಯ, ಶಿರಸಿ ಮಾರಿಕಾಂಬಾ ದೇವಾಲಯ, ರೇಣುಕಾ ಯಲ್ಲಮ್ಮ ದೇವಿ ದೇವಾಲಯ. ದೇವಾಲಯದ ಇತಿಹಾಸದ ಬಗ್ಗೆ ಹೆಚ್ಚು ವಿವರವಾದ ನೋಟ, ಸ್ಥಳ, ದೇವಿಯ ಕುರಿತಾದ ಪುರಾಣ ಕಥೆ, ಮತ್ತು ಮಹತ್ವ ಇಲ್ಲಿದೆ: 1. ಚಾಮುಂಡೇಶ್ವರಿ ದೇವಾಲಯ – ಮೈಸೂರು ಮೈಸೂರು ನಗರದಲ್ಲಿನ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯವು ಪವಿತ್ರವಾದ ಸ್ವರ್ಗವಾಗಿದ್ದು, ರಾಕ್ಷಸ ಮಹಿಷಾಸುರನನ್ನು ಸಂಹರಿಸಿ ಈ ಪ್ರದೇಶಕ್ಕೆ ಶಾಂತಿ ತಂದ ದುರ್ಗಾ ದೇವಿಯ ಉಗ್ರ ರೂಪಕ್ಕೆ ಸಮರ್ಪಿತವಾಗಿದೆ. ಚಾಮುಂಡೇಶ್ವರಿ(ದುರ್ಗಾ ದೇವಿ)ಯನ್ನು ಸಿಂಹದ ಮೇಲೆ ಸವಾರಿ ಮಾಡುವ ಎಂಟು ಕೈಗಳಲ್ಲಿ ಎಂಟು ಆಯುಧ ಹಿಡಿದಿರುವ ಯೋಧ ದೇವತೆಯಾಗಿ ಚಿತ್ರಿಸಲಾಗಿದೆ. ಮೈಸೂರಿನಲ್ಲಿರುವ ಆಕೆಯ ಈ ದೇವಾಲಯವು ಅತ್ಯಂತ ಪ್ರಸಿದ್ಧ51 ಮಹಾ ಶಕ್ತಿ […] - [ತುಳಸಿ ಸಸ್ಯದ ದೈವಿಕ ಮಹತ್ವ, ವಿಧಗಳು ಹಾಗೂ ತುಳಸಿ ಸಸ್ಯದ ಹಿಂದಿರುವ ದಂತ ಕಥೆ.](https://kirunota.online/%e0%b2%a4%e0%b3%81%e0%b2%b3%e0%b2%b8%e0%b2%bf-%e0%b2%b8%e0%b2%b8%e0%b3%8d%e0%b2%af%e0%b2%a6-%e0%b2%a6%e0%b3%88%e0%b2%b5%e0%b2%bf%e0%b2%95-%e0%b2%ae%e0%b2%b9%e0%b2%a4%e0%b3%8d%e0%b2%b5-%e0%b2%b5/): ಹಿಂದೂ ಸಂಪ್ರದಾಯದಲ್ಲಿ, ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ (ತುಳಸಿ ದೇವಿ ಎಂದೂ ಕರೆಯುತ್ತಾರೆ) ಐಹಿಕ ಅಭಿವ್ಯಕ್ತಿ ಎಂದು ಪೂಜಿಸಲಾಗುತ್ತದೆ ಮತ್ತು ಸಂಪತ್ತು, ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯ ಭೌತಿಕ ಸಾಕಾರವಾಗಿ ನೋಡಲಾಗುತ್ತದೆ. ಇದನ್ನು ಪವಿತ್ರ ಸಸ್ಯವೆಂದು “ಸಸ್ಯ ಸಾಮ್ರಾಜ್ಯದಲ್ಲಿ ದೇವರ ಅಭಿವ್ಯಕ್ತಿ” ಪರಿಗಣಿಸಲಾಗುತ್ತದೆ. ಮನೆಯಲ್ಲಿ ತುಳಸಿಯ ಉಪಸ್ಥಿತಿಯು ನಕಾರಾತ್ಮಕ ಪ್ರಭಾವಗಳನ್ನು ನಿವಾರಿಸುತ್ತದೆ ಮತ್ತು ಕುಟುಂಬವನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ತುಳಸಿ ಸಸ್ಯದ ಪ್ರತಿಯೊಂದು ಭಾಗವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ, ಅದರ ಬೇರುಗಳು ತೀರ್ಥಯಾತ್ರೆಯನ್ನು ಪ್ರತಿನಿಧಿಸುತ್ತವೆ, ಗಂಗಾ ಅದರ ಬೇರುಗಳಲ್ಲಿ ಹರಿಯುತ್ತದೆ. ಶಾಖೆಗಳು ದೈವತ್ವವನ್ನು ಪ್ರತಿನಿಧಿಸುತ್ತವೆ, ಸೃಷ್ಟಿಕರ್ತ-ದೇವರು ಬ್ರಹ್ಮ ಅದರ ಶಾಖೆಗಳಲ್ಲಿ ವಾಸಿಸುತ್ತಾನೆ ಮತ್ತು ಕಿರೀಟವು ಧರ್ಮಗ್ರಂಥಗಳದ ವೇದಗಳ ತಿಳುವಳಿಕೆಯನ್ನು ಸಂಕೇತಿಸುತ್ತದೆ. ಎಲ್ಲಾ ದೇವತೆಗಳು ಅದರ ಕಾಂಡ ಮತ್ತು ಅದರ ಎಲೆಗಳಲ್ಲಿದ್ದಾರೆ ಎಂದು ಹೇಳುತ್ತದೆ. ತುಳಸಿ ಸಸ್ಯವು ಸಾಮಾನ್ಯ ಸಸ್ಯವಲ್ಲ, ಇದನ್ನು ಭಾರತೀಯ ಮನೆಗಳಲ್ಲಿ “ಗಿಡಮೂಲಿಕೆಗಳ ರಾಣಿ” ಎಂದು ಕರೆಯಲಾಗುತ್ತದೆ.  “ಪತ್ನಿತ್ವ ಮತ್ತು ತಾಯ್ತನದ ಸಂಕೇತ” ಎಂದು ಕರೆಯಲಾಗುತ್ತದೆ. ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ನಕಾರಾತ್ಮಕ […] - [ಹಿಂದೂ ನದಿಗಳ ಉಗಮ ಸ್ಥಾನಗಳು ಮತ್ತು ಹಿಂದಿನ ಪುರಾಣ ದಂತಕಥೆ](https://kirunota.online/%e0%b2%b9%e0%b2%bf%e0%b2%82%e0%b2%a6%e0%b3%82-%e0%b2%a8%e0%b2%a6%e0%b2%bf%e0%b2%97%e0%b2%b3-%e0%b2%89%e0%b2%97%e0%b2%ae-%e0%b2%b8%e0%b3%8d%e0%b2%a5%e0%b2%be%e0%b2%a8%e0%b2%97%e0%b2%b3%e0%b3%81/): ಭಾರತದಲ್ಲಿ ಪ್ರತಿಯೊಂದು ನದಿಯನ್ನು ತಾಯಿಯ ರೂಪದಲ್ಲಿ ನೋಡುತ್ತಾರೆ ಮತ್ತು ತಾಯಿಗೆ ಹೋಲಿಸುತ್ತಾರೆ ಹಾಗು ಮಾತೃದೇವತೆಯಾಗಿ ಪೂಜಿಸುತ್ತಾರೆ. ಏಕೆಂದರೇ ತಾಯಿ ಜನ್ಮ ನೀಡಿ ಜೀವನವನ್ನು ಉಳಿಸಿಕೊಡುವಂತೆಯೇ, ನದಿಗಳು ಜನರ ಜೀವನವಾಗಿವೆ ಅವರ ಜೀವನಾಡಿಗಳಾಗಿವೆ. ನದಿಗಳು ಕುಡಿಯುವ ನೀರು, ಕೃಷಿ, ಕೈಗಾರಿಕೆ ಹೀಗೆ ಜನರ ವಿವಿಧ ಅಗತ್ಯಗಳಿಗೆ ನೀರನ್ನು ಒದಗಿಸುತ್ತವೆ. ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತವೆ ಹಾಗು ಪ್ರಾಣಿ, ಪಕ್ಷಿ, ಗಿಡ, ಮರಗಳಿಗೆಲ್ಲರಿಗೂ ನದಿಗಳು ಜೀವನಾಡಿಯಾಗಿದೆ ಎಂದರೇ ತಪ್ಪಾಗಲಾರದು. ನದಿಗಳು ಸಾಮಾನ್ಯವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧೀಕರಣ ಮಾಡುತ್ತವೆ. ಜನರು ಪಾಪಗಳನ್ನು ಕಳೆದು ಮೋಕ್ಷವನ್ನು ಪಡೆಯಲು ಪುಣ್ಯ ನದಿಗಳಲ್ಲಿ ಮಿಂದು ಪುಣ್ಯ ಸ್ನಾನ ಮಾಡುವ ಅಭ್ಯಾಸ ಕಂಡುಬರುತ್ತದೆ. ಉದಾಹರಣೆಗೆ ಗಂಗೆ ಪಾಪಗಳನ್ನು ತೊಳೆಯುತ್ತಾಳೆ ಎಂಬುದು ಎಲ್ಲರ ನಂಬಿಕೆ. ಅದೇ ರೀತಿಯಲ್ಲಿ ಪ್ರತಿಯೊಂದು ನದಿಗೂ ತನ್ನದೇ ಅದ ವಿಶೇಷತೆಗಳು, ಮಹತ್ವಗಳು, ವೈಶಿಷ್ಟ್ಯತೆಗಳು ಇರುವುದರ ಜೊತೆಗೆ, ಅವುಗಳ ಉಗಮದ ಬಗ್ಗೆ ವಿಭಿನ್ನವಾದ ಪೌರಾಣಿಕ ದಂತ ಕಥೆಗಳನ್ನು ಹೊಂದಿವೆ. ಅವುಗಳಲ್ಲಿ ಕೆಲವು ನದಿಗಳ ಬಗೆಗಿನ ಮಾಹಿತಿ ಇಲ್ಲಿವೇ. 1. ಗಂಗಾ […] - [ಏಕಾದಶಿಯ ಮಹತ್ವ ಹಾಗೂ ವಿಶೇಷತೆಗಳು](https://kirunota.online/%e0%b2%8f%e0%b2%95%e0%b2%be%e0%b2%a6%e0%b2%b6%e0%b2%bf%e0%b2%af-%e0%b2%ae%e0%b2%b9%e0%b2%a4%e0%b3%8d%e0%b2%b5-%e0%b2%b9%e0%b2%be%e0%b2%97%e0%b3%82-%e0%b2%b5%e0%b2%bf%e0%b2%b6%e0%b3%87%e0%b2%b7/): ಏಕಾದಶಿಯು ಸಂಸ್ಕೃತದ ಏಕಾದಶ ಎಂಬ ಪದದಿಂದ ಬಂದಿದೆ, ಏಕಾದಶಿ ಎಂದರೇ 11 ಎಂದರ್ಥ(ಏಕ-ಒಂದು,ದಶ-ಹತ್ತು). ಏಕಾದಶಿ ಪ್ರತಿ 15 ದಿನಗಳಿಗೊಮ್ಮೆ ಬರುವ ಹಿಂದೂ ಹಬ್ಬ. ಇದು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸ್ವಯಂ ಶುದ್ಧೀಕರಣಕ್ಕೆ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು, ಭಕ್ತರು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಮೋಕ್ಷವನ್ನು ಸಾಧಿಸಲು ಉಪವಾಸ ಮತ್ತು ಇತರ ಪ್ರತಿಜ್ಞೆಗಳನ್ನು ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್‌ನಲ್ಲಿ ವಾರ್ಷಿಕವಾಗಿ 24 ಏಕಾದಶಿಗಳನ್ನು ಆಚರಿಸಲಾಗುತ್ತದೆ ಮತ್ತು ಒಂದು ವರ್ಷದಲ್ಲಿ ಎರಡು ಹೆಚ್ಚುವರಿ ಏಕಾದಶಿಗಳು ಮಧ್ಯಂತರ ತಿಂಗಳುಗಳ ಕಾರಣದಿಂದಾಗಿ ಸಂಭವಿಸಬಹುದು, ಇದರಿಂದಾಗಿ ಒಟ್ಟು 26 ಏಕಾದಶಿಗಳು ಬರುತ್ತವೆ. ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಒಂದು ಏಕಾದಶಿ ಮತ್ತು ಇನ್ನೊಂದು ಏಕಾದಶಿಯ ನಡುವೆ, ಸರಿಸುಮಾರು 15 ದಿನಗಳು ಕಳೆದುಹೋಗುತ್ತವೆ. ಪ್ರತಿ ಚಾಂದ್ರಮಾನ ಪಾಕ್ಷಿಕದ 11ನೇ ದಿನದಂದು ಏಕಾದಶಿ ಬರುತ್ತದೆ, ಅಂದರೆ ಪ್ರತಿ ಚಾಂದ್ರಮಾನ ಮಾಸದ ಬೆಳದಿಂಗಳಲ್ಲಿ (ಶುದ್ಧ ಅಥಾವ ಶುಕ್ಲ ಪಕ್ಷ) ಒಂದು ಏಕಾದಶಿ ಮತ್ತು ಕಪ್ಪು ಬಣ್ಣದ ಅರ್ಧದಲ್ಲಿ (ಬಹುಳ ಅಥಾವ ಕೃಷ್ಣ ಪಕ್ಷ) ಇನ್ನೊಂದು […] - [ಒಂದೇ ರೇಖಾಂಶದಲ್ಲಿರುವ ಎಂಟು ಪ್ರಾಚೀನ ಶಿವದೇವಾಲಯಗಳು](https://kirunota.online/%e0%b2%92%e0%b2%82%e0%b2%a6%e0%b3%87-%e0%b2%b0%e0%b3%87%e0%b2%96%e0%b2%be%e0%b2%82%e0%b2%b6%e0%b2%a6%e0%b2%b2%e0%b3%8d%e0%b2%b2%e0%b2%bf%e0%b2%b0%e0%b3%81%e0%b2%b5-%e0%b2%8e%e0%b2%82%e0%b2%9f%e0%b3%81/): ನಿಮಗೆ ತಿಳಿದಿದೆಯೇ, 8 ಪ್ರಾಚೀನ ದೇವಾಲಯಗಳು 79° E 41’54”ರ ಒಂದೇ ಭೌಗೋಳಿಕ ರೇಖಾಂಶದಲ್ಲಿ ಹೆಚ್ಚು ಕಡಿಮೆ ಇವೆ ಮತ್ತು ಈ ಜನಪ್ರಿಯ ದೇವಾಲಯಗಳು ಕೇದಾರನಾಥ ದೇವಾಲಯ (ಉತ್ತರಾಖಂಡ), ಕಾಳೇಶ್ವರ ಮುಕ್ತೀಶ್ವರ ಸ್ವಾಮಿ ದೇವಾಲಯ (ತೆಲಂಗಾಣ), ಶ್ರೀಕಾಳಹಸ್ತಿ ದೇವಾಲಯ (ಆಂಧ್ರಪ್ರದೇಶ), ಏಕಾಂಬರೇಶ್ವರ ದೇವಾಲಯ, ಜಂಬುಕೇಶ್ವರ ದೇವಾಲಯ, ಅಣ್ಣಾಮಲೈಯರ್ ದೇವಾಲಯ, ನಟರಾಜ ದೇವಾಲಯ ಮತ್ತು ಕೊನೆಯದಾಗಿ ರಾಮನಾಥಸ್ವಾಮಿ ದೇವಾಲಯ (ತಮಿಳುನಾಡು). ಪ್ರಾಚೀನ ವಾಸ್ತುಶಿಲ್ಪದ ಅದ್ಭುತ ಸಾಧನೆಯಲ್ಲಿ, ಭಾರತದಾದ್ಯಂತ 4,000 ವರ್ಷಗಳ ಹಿಂದೆ ಶಿವ ದೇವಾಲಯಗಳನ್ನು ಜಿಪಿಎಸ್ ಅಥವಾ ಉಪಗ್ರಹ ಚಿತ್ರಣದಂತಹ ಆಧುನಿಕ ತಂತ್ರಜ್ಞಾನದ ಸಹಾಯವಿಲ್ಲದೆ ನಿರ್ಮಿಸಲಾಯಿತು. ನೂರಾರು ಕಿಲೋಮೀಟರ್‌ಗಳಿಂದ ಬೇರ್ಪಟ್ಟಿದ್ದರೂ, ಈ ದೇವಾಲಯಗಳನ್ನು ಗಮನಾರ್ಹ ನಿಖರತೆಯೊಂದಿಗೆ ನಿರ್ಮಿಸಲಾಯಿತು, ನಿರ್ದಿಷ್ಟ ರೇಖಾಂಶಕ್ಕೆ – 79° ಪೂರ್ವಕ್ಕೆ – ಜೋಡಿಸಲಾಯಿತು. ಶಿವ ಶಕ್ತಿ ಅಕ್ಷ ರೇಖ ಈ ಎಂಟು ಶಿವಾಲಯಗಳು: ಪ್ರಯಾಣವು ಕೇದಾರನಾಥದಲ್ಲಿ ಪ್ರಾರಂಭವಾಗುತ್ತದೆ, ಅಲ್ಲಿ ಪ್ರಾಚೀನ ವಾಸ್ತುಶಿಲ್ಪಿಗಳು ಆಧ್ಯಾತ್ಮಿಕ ಜ್ಞಾನೋದಯಕ್ಕಾಗಿ ತಮ್ಮ ಅನ್ವೇಷಣೆಯನ್ನು ಪ್ರಾರಂಭಿಸಿದರು. ಅಲ್ಲಿಂದ, ಅವರು ರಾಮೇಶ್ವರಂಗೆ ಪ್ರಯಾಣಿಸಿದರು, ದಾರಿಯುದ್ದಕ್ಕೂ ಇತರ ದೇವಾಲಯಗಳ […] - [ಯಾವ ಯಾವ ಮರಗಳಲ್ಲಿ, ಎಲೆಗಳಲ್ಲಿ ಯಾವ ಯಾವ ದೇವರು ವಾಸಿಸುತ್ತಾರೆ ಮತ್ತು ದೈವಿಕ ವಿಷಯಗಳು ಹಾಗೂ ಔಷಧೀಯ ಗುಣಗಳು  ](https://kirunota.online/%e0%b2%af%e0%b2%be%e0%b2%b5-%e0%b2%af%e0%b2%be%e0%b2%b5-%e0%b2%ae%e0%b2%b0%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%8e%e0%b2%b2%e0%b3%86%e0%b2%97%e0%b2%b3%e0%b2%b2%e0%b3%8d/): ಪ್ರಪಂಚದ ಅನೇಕ ಪುರಾಣಗಳಲ್ಲಿ ಮರಗಳು ಗಮನಾರ್ಹವಾಗಿವೆ ಮತ್ತು ಅವುಗಳಿಗೆ ಯುಗಯುಗಾಂತರಗಳಲ್ಲಿ ಆಳವಾದ ಮತ್ತು ಪವಿತ್ರ ಅರ್ಥಗಳನ್ನು ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಪ್ರಾಣಿಗಳಿಗೆ, ಪಕ್ಷಿಗಳಿಗೆ ಹೇಗೆ ದೈವಿಕ ಸ್ಥಾನವನ್ನು ನೀಡಿದ್ದಾರೋ ಹಾಗೇ ಕೆಲವೊಂದು ಗಿಡ, ಮರಗಳಿಗೂ ದೈವಿಕ ಸ್ಥಾನವನ್ನು ನೀಡಿದ್ದಾರೆ. ಹಲವಾರು ಮರಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಅವು ಹೆಚ್ಚಾಗಿ ದೇವತೆಗಳೊಂದಿಗೆ ಸಂಬಂಧ ಹೊಂದಿವೆ. ಕೆಲವು ಮರಗಳು ದೇವತೆಗಳ ವಾಸಸ್ಥಾನವೆಂದು ನಂಬಲಾಗಿದೆ. ಅಂತಹ ಕೆಲವು ಮರಗಳ ಮತ್ತು ಎಲೆಗಳ ಬಗ್ಗೆ ತಿಳಿಯೋಣ ಬನ್ನಿ. ವೈಜ್ಞಾನಿಕ ವಿಷಯ: ಮರಗಳಿಲ್ಲದ ಜಗತ್ತನ್ನು ನಾವು ಕಲ್ಪಿಸಿಕೊಳ್ಳಲಾಗುವುದಿಲ್ಲ, ಮರಗಳು ಭೂಮಿಯ ಮೇಲಿನ ಅತ್ಯಂತ ಅಗತ್ಯವಾದ ಜೀವಿಗಳಲ್ಲಿ ಒಂದಾಗಿದೆ. ಜೀವಿಗಳು ಉಸಿರಾಡುವ ಗಾಳಿಯನ್ನು ಸ್ವಚ್ಛಗೊಳಿಸಲು ಅವರು ನಿರಂತರವಾಗಿ ಕೆಲಸ ಮಾಡುತ್ತಾರೆ. ಅಗ್ನಿಯ ಬೆಂಕಿಯು ಜೀವಕ್ಕೆ ಇಂಧನ ನೀಡುವಂತೆಯೇ ಸೂರ್ಯನ ಬೆಳಕನ್ನು ಶಕ್ತಿಯಾಗಿ ಪರಿವರ್ತಿಸುವುದು, ನೀರನ್ನು ಹೀರಿಕೊಳ್ಳುವುದು ಮತ್ತು ಬಿಡುಗಡೆ ಮಾಡುವುದು, ಕಾರ್ಬನ್-ಡೈ-ಆಕ್ಸೈಡನ್ನು ಹೀರಿಕೊಳ್ಳುವುದು ಮತ್ತು ಆಮ್ಲಜನಕ ಬಿಡುಗಡೆ ಮಾಡುವುದು. ಆಯುರ್ವೇದ ಔಷಧಗಳಿಗೆ ಇವುಗಳ ಕೊಡುಗೆ ಅಪಾರವಾಗಿದ್ದು, ಮರದ ಎಲೆ, ಹೂ, […] - [ಪಾರ್ವತಿದೇವಿಯ 51 ಶಕ್ತಿಪೀಠಗಳ ಹೆಸರು, ವಿಶೇಷತೆಗಳು ಮತ್ತು ನೆಲೆಸಿರುವ ಸ್ಥಳ](https://kirunota.online/%e0%b2%aa%e0%b2%be%e0%b2%b0%e0%b3%8d%e0%b2%b5%e0%b2%a4%e0%b2%bf%e0%b2%a6%e0%b3%87%e0%b2%b5%e0%b2%bf%e0%b2%af-51-%e0%b2%b6%e0%b2%95%e0%b3%8d%e0%b2%a4%e0%b2%bf%e0%b2%aa%e0%b3%80%e0%b2%a0%e0%b2%97/): ಶಕ್ತಿಪೀಠಗಳು ಪಾರ್ವತಿ ದೇವಿಗೆ ಅರ್ಪಿತವಾದ ಪವಿತ್ರ ದೇವಾಲಯಗಳಾಗಿವೆ, ಇದನ್ನು ಆದಿಶಕ್ತಿ ಅಥವಾ ಪರಮ ಶಕ್ತಿ ಎಂದೂ ಕರೆಯುತ್ತಾರೆ. ಭಾರತದಾದ್ಯಂತ ಹಾಗು ಬಾಂಗ್ಲಾದೇಶ,ನೇಪಾಳ,ಪಾಕಿಸ್ತಾನ ಟಿಬೆಟ್ ಮತ್ತು ಶ್ರೀಲಂಕಾ ಹೀಗೆ ಹರಡಿರುವ 51 ಅಂತಹ ಶಕ್ತಿಪೀಠಗಳು ಇವೆ ಎಂದು ಹೇಳಲಾಗುತ್ತದೆ. ಅಲ್ಲಿ ಪಾರ್ವತಿಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ಈ ದೇವಾಲಯಗಳ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ. ಭಾರತದಾದ್ಯಂತ ಕಂಡುಬರುವ  ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ಇತಿಹಾಸ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದು, ಹಿಂದೂ ಪುರಾಣ ಮತ್ತು ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಅವುಗಳನ್ನು ಆಕರ್ಷಕ ತಾಣಗಳನ್ನಾಗಿ ಮಾಡುತ್ತದೆ. ದಂತಕಥೆ: ಹಿಂದೂ ಪುರಾಣಗಳ ಪ್ರಕಾರ, ಶಿವನ ಪತ್ನಿ ಪಾರ್ವತಿ ದೇವಿಯು ತನ್ನ ಮರ್ತ್ಯ ರೂಪವನ್ನು (ಸತಿ) ತ್ಯಜಿಸಿ ಹೋಮಾಗ್ನಿಯಲ್ಲಿ ಸೇರಿದ ನಂತರ ಭಗವಾನ್ ವಿಷ್ಣುವಿನ ಕೋಪದಿಂದ 51 ತುಂಡುಗಳಾಗಿ ಹರಿದುಹೋದಳು. ಈ 51 ತುಣುಕುಗಳನ್ನು ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಮರೆಮಾಡಲಾಗಿದೆ ಎಂದು ಹೇಳಲಾಗುತ್ತದೆ ಮತ್ತು ಪ್ರತಿ ತುಂಡನ್ನು ಶಕ್ತಿಪೀಠವಾಗಿ ಪೂಜಿಸಲಾಗುತ್ತದೆ. ಸತಿಯ ದೇಹವನ್ನು […] - [ಗಣೇಶನ ಸೊಂಡಿಲಿನ ಮಹತ್ವ ಮತ್ತು ವಿಶೇಷತೆ, ಹಾಗೂ ಯಾವ ಕಡೆಗೆ ಸೊಂಡಿಲು ಭಾಗಿರುವ ಗಣೇಶ ಮನೆಯಲ್ಲಿ ಪೂಜಿಸಲು ಶ್ರೇಷ್ಟ.](https://kirunota.online/%e0%b2%97%e0%b2%a3%e0%b3%87%e0%b2%b6%e0%b2%a8-%e0%b2%b8%e0%b3%8a%e0%b2%82%e0%b2%a1%e0%b2%bf%e0%b2%b2%e0%b2%bf%e0%b2%a8-%e0%b2%ae%e0%b2%b9%e0%b2%a4%e0%b3%8d%e0%b2%b5-%e0%b2%ae%e0%b2%a4%e0%b3%8d/): ಗಣೇಶನ ಸೊಂಡಿಲು! ಇದು ಹೇಗೆ ಅವರ ವಿಶೇಷ ಗುರುತು ಮತ್ತು ಸೊಂಡಿಲಿನ ಹಿಂದಿನ ಆಧ್ಯಾತ್ಮಿಕ ಮತ್ತು ದೈವಿಕ ಅರ್ಥವನ್ನು ತಿಳಿಯೋಣ. ಪ್ರಥಮ ವಂದ್ಯನಾದ ಗಣಪತಿಯನ್ನೂ ನಾನಾ ರೀತಿಯಲ್ಲಿ ಪೂಜಿಸುವುದುಂಟು, ಗಣಪನ ಪ್ರತಿಯೊಂದು ಆಕಾರಕ್ಕೂ ಅದರದೇ ಆದ ವಿಶೇಷತೆ ಇದೆ.  ಆನೆಯ ಮುಖ (ಗಜವದನ), ಮೊರದಂತಹ ಕಿವಿಗಳು (ಶೂರ್ಪಕರ್ಣ ), ಎಡಕ್ಕೆ ಅಥಾವ ಬಲಕ್ಕೆ ಭಾಗಿದ ಸೊಂಡಿಲು ( ಶುಂಡಾಲ), ಏಕದಂತ(ದಂತಿಮುಖ), ದೊಡ್ಡ ಹೊಟ್ಟೆ (ಲಂಬೋದರ), ಮೂರು ಕೈಗಳಲ್ಲಿ ಪಾಶ, ಅಂಕುಶ ಮತ್ತು ಮೋದಕ, ನಾಲ್ಕನೆಯ ಕೈ ಭಕ್ತನಿಗೆ ಅಭಯ ಹಸ್ತ  ಸೂಚಿಸುತ್ತದೆ (ಚತುರ್ಭುಜ), ಕೆಂಪುಬಣ್ಣದ ಸುಂದರ ದೇಹ; ಇದೇ ಗಣೇಶನ ಆಕೃತಿ.   ಗಣಪತಿಯ ದೊಡ್ಡ “ತಲೆ” ಅವನು ಮಹಾ ಬುದ್ಧಿಶಾಲಿ ಎಂಬುದನ್ನು ಸೂಚಿಸುತ್ತದೆ.  ಗಣಪತಿಯ “ಕಿವಿಗಳು” ಮೊರಗಳಂತೆ ಅಗಲವಾಗಿವೆ. ಮೊರದಲ್ಲಿ ಧಾನ್ಯವನ್ನು ಕೇರುತ್ತಾರೆ, ಇದರಿಂದ ಹೊಟ್ಟು, ಕಾಳು ಬೇರೆ ಬೇರೆ ಆಗುತ್ತವೆ. ಹಾಗೆಯೇ ಗಣೇಶನು ಸತ್ಯವನ್ನೂ ಸುಳ್ಳನ್ನು ಬೇರೆ ಬೇರೆ ಮಾಡುತ್ತಾನೆ. ಈ ಅಗಲವಾದ ಕಿವಿಗಳು ಭಕ್ತರ ಪ್ರಾರ್ಥನೆಗಳನ್ನು ಗಮನವಿಟ್ಟು ಕೇಳುತ್ತಾನೆ […] ## Pages - [Home](https://kirunota.online/): Discover the Truth Behind Mythological Stories and Ancient Indian Culture. Explore age-old myths, their scientific explanations, and the rich cultural heritage of India. Explore Our Stories Featured Stories - [Blog](https://kirunota.online/blog/) - [About](https://kirunota.online/about-2/): ಕಿರುನೋಟ: ಕರ್ನಾಟಕದ ಹೊಸ ಕಥೆಗಳ ಸೂತರೋಪ ಕಿರುನೋಟದ ಪರಿಚಯ: ಜಗತ್ತಿನ ಸುಂದರ ಸ್ಥಳಗಳು ಮತ್ತು ಸಂಗತಿಗಳನ್ನು keşfetmək ಕಿರುನೋಟವು ಬಳಕೆದಾರರಿಗೆ ನಿಖರವಾದ ಮಾಹಿತಿಯನ್ನು ನೀಡುತ್ತಿದ್ದು, ನೂರಾರು ಸಮಸ್ಯೆಗಳನ್ನು ಪರಿಹರಿಸುತ್ತೇವೆ. ನಮ್ಮ ದೃಷ್ಟಿ ಭಿನ್ನ ಬಂಡವಾಳದ ಕಾರುಣ್ಯದಿಂದ, ವಿನೂತನ ಕಥೆಗಳನ್ನು ಹಂಚುವ ಸಂಸ್ಥೆ ಆಗಲು ನಮ್ಮನ್ನು ನಿರ್ಮಿಸುತ್ತೇವೆ. ನಮ್ಮ ಧ್ಯೇಶ ಸಾಹಯ್ಯ ಹಾಗೂ ವೈವಿಧ್ಯಮಯ ಕಥೆಗಳನ್ನು ಹಂಚಿಕೆ ಮಾಡುವ ಮೂಲಕ, Karnataka ಮತ್ತು ಭಾರತವನ್ನು ಆನಂದಿಸುತ್ತೇವೆ. ಅಧಿಕಾರಗಳು ನಾವು ಸದಾ ಸತ್ಯತೆ, ಗೌರವ ಮತ್ತು ವಿದೇಶಗಳನ್ನು ಅಭಿವೃದ್ಧಪಡಿಸುತ್ತೇವೆ. ## Optional - [Agent (MCP protocol)](websites-agents.hostinger.com/kirunota.online/mcp) [comment]: # (Generated by Hostinger Tools Plugin)